ನ್ಯೂಸ್

'ಓಜಿ' ಬಗ್ಗೆ ಹೊರಬಿತ್ತು ಕುತೂಹಲಕಾರಿ ಮಾಹಿತಿ; ಸೆಪ್ಟಂಬರ್​ 02 ರಂದು ನಿರೀಕ್ಷಿಸಿ ಎಂದ ಚಿತ್ರತಂಡ!

ಆಂಧ್ರಪ್ರದೇಶ: ಟಾಲಿವುಡ್​ನ ಪವರ್​ ಸ್ಟಾರ್​, ನಟ ಪವನ್​ ಕಲ್ಯಾಣ್​ ನಟನೆಯ ಬಹುನಿರೀಕ್ಷಿತ 'ಓಜಿ' ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳುತ್ತಿದೆ. ಸದ್ಯ ಸಿನಿಮಾ ಬಗ್ಗೆ ಹೊಸ ಮಾಹಿತಿಯೊಂದು ಲಭ್ಯವಾಗಿದ್ದು, ಎಲ್ಲಾ ಪ್ರಶ್ನೆಗಳಿಗೂ ಸೆಪ್ಟಂಬರ್​ 02 ರಂದು ಉತ್ತರ ಸಿಗಲಿದೆ, ನಿರೀಕ್ಷಿಸಿ ಎಂದು ಚಿತ್ರತಂಡ ತಿಳಿಸಿದೆ.

ಪವನ್ ಕಲ್ಯಾಣ್ ಅವರ 'ಓಜಿ' ಕುರಿತು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳು ವ್ಯಕ್ತವಾಗುತ್ತಿದೆ. ವಿಶೇಷ ಎಂದರೆ ಪವನ್ ಅವರ ಅಭಿಮಾನಿ ಸುಜೀತ್ ಈ ಗ್ಯಾಂಗ್‌ಸ್ಟರ್-ಆ್ಯಕ್ಷನ್​ ಜಾನರ್​ನ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಪ್ರೇಕ್ಷಕರು ಮತ್ತು ಫ್ಯಾನ್ಸ್​ ಚಿತ್ರದ ಬಗ್ಗೆ ಹೊಸ ಮಾಹಿತಿಗಳನ್ನು ನೀಡಿ ಎಂದು ಚಿತ್ರತಂಡವನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರ ತಯಾರಕರು, ಸೆಪ್ಟೆಂಬರ್ 2 ರಂದು ನಿಮ್ಮ ಭಾರೀ ನಿರೀಕ್ಷೆಗಳಿಗೆ ಉತ್ತರ ಸಿಗಲಿದೆ ಎಂದು ತಿಳಿಸಿದೆ.

ಸುಜೀತ್ ನಿರ್ದೇಶನದಲ್ಲಿ ಮೂಡಿಬರಲಿರುವ 'ಓಜಿ' ಚಿತ್ರದಲ್ಲಿ ಪವನ್​ ಕಲ್ಯಾಣ್​ಗೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ನಟಿಸಲಿದ್ದಾರೆ. ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅರ್ಜುನ್​ ದಾಸ್​, ಹರೀಶ್​ ಉತಾಮನ್​ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಸ್​. ಥಮನ್ ಅವರ ಸಂಗೀತವಿರಲಿದೆ,(ಏಜೆನ್ಸೀಸ್).