ನ್ಯೂಸ್

ಡಿ.ಕೆ.ಶಿವಕುಮಾರ್​ಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದು!?

ಚಾಮರಾಜನಗರ: ಭಾರತ್​ ಜೋಡೋ ಯಾತ್ರೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಿದ್ದಾರೆ. ರಾಹುಲ್ ಗಾಂಧಿಗೆ ಸ್ವಾಗತ ಕೋರುವಾಗಲೂ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ನಡೆದಿದೆ ಎನ್ನಲಾಗಿದೆ.

ಬಂಡೀಪುರ ಅರಣ್ಯದ ರಸ್ತೆಯಲ್ಲೇ ರಾಹುಲ್​ ಗಾಂಧಿ ಅವರನನು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದರು. ಅವರ ಕಾರಿನಲ್ಲೇ ಕುಳಿತು ಮಾಗಮಧ್ಯೆ ಕಾಫಿ-ತಿಂಡಿಗೆಂದು ಹಂಗಳ ಗ್ರಾಮದ ರೆಸಾರ್ಟ್​ಗೆ ರಾಹುಲ್​ ಗಾಂಧಿ ಅವರನ್ನ ಕರೆದೊಯ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತರೇಹವಾರಿ ಚರ್ಚೆಯಾಗುತ್ತಿದೆ.

'ಇತ್ತ ವೇದಿಕೆ ಕಾರ್ಯಕ್ರಮದ ಸಿದ್ಧತೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನೋಡಿಕೊಳ್ಳುತ್ತಿದ್ದರೆ, ಅತ್ತ ಡಿಕೆಶಿ ಅವರನ್ನ ಯಾಮಾರಿಸಿ ಕಾಡಿನ ದಾರಿಯಲ್ಲೇ ರಾಹುಲ್ ಗಾಂಧಿ ಅವರನ್ನ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಬಳಿ ರಾಹುಲ್ ಗಾಂಧಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಡಿಕೆಶಿಯನ್ನು ಬಿಟ್ಟು ಒಬ್ಬರೇ ಆಗಮಿಸಿ ರಾಗಾಗೆ ಸಿದ್ದು ಸ್ವಾಗತ ಕೋರಿದ್ದಾರೆ. ನಂತರ ದಾರಿ ಮದ್ಯ ಖಾಸಗಿ ರೆಸಾರ್ಟ್​ನಲ್ಲಿ ರಾಹುಲ್​ ಜತೆ ಸಿದ್ದರಾಮಯ್ಯ ತಿಂಡಿ ತಿಂದರು. ಈ ವೇಳೆ ಸಿದ್ದರಾಮಯ್ಯರ ಬೆಂಬಲಿತ ಮುಖಂಡರು ಮಾತ್ರ ಇದ್ದರು. ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಬಳಿ ರಾಹುಲ್ ಗಾಂಧಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕೂ ಮೊದಲೇ ದಾರಿ ಮಧ್ಯ ಬಂದು ರಾಹುಲ್​ಗೆ ಸ್ವಾಗತ ಕೋರಿದ್ದಾರೆ...' ಎಂಬ ಚರ್ಚೆ ಶುರುವಾಗಿದೆ.