ನ್ಯೂಸ್

VIDEO| ಬಿಯರ್​ ಬಾಟಲಿ ಸಾಗಿಸುತ್ತಿದ್ದ ಲಾರಿ ಅಪಘಾತ: 'ಎಣ್ಣೆ'ಗಾಗಿ ಮುಗಿಬಿದ್ದ ಜನ

arunakunigal

ಚಿಕ್ಕಮಗಳೂರು: ಬಿಟ್ಟಿ ಏನಾದ್ರು ಸಿಗುತ್ತೆ ಜನರ ಕ್ಯೂ ಮೈಲಿಗಟ್ಟಲೇ ನಿಲ್ಲುತ್ತೆ. ಇನ್ನು ಪುಕ್ಕಟ್ಟೆ ಬಿಯರ್ ಅಂದ್ರೆ ಬಿಡ್ತಾರಾ? ಲಾಟಿ ಏಟಿಗೂ ಬಗ್ಗದೆ ನಾ ಮುಂದು-ತಾ ಮುಂದು ಎಂಬಂತೆ ನುಗ್ಗುತ್ತಾರೆ.

ಇಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ಇಂದು(ಮಂಗಳವಾರ) ಸಂಭವಿಸಿದೆ. ಮದ್ಯದ ಬಾಟಲಿ ತುಂಬಿಕೊಂಡು ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿ ಎಂ.ಸಿ.ಹಳ್ಳಿ ಬಳಿ ಅಪಘಾತಕ್ಕೀಡಾಯಿತು.

ಬಿಯರ್​ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಸುದ್ದಿ ತಿಳಿಯುತ್ತಿದ್ದಂತೆ ಬಿಯರ್​ಗಾಗಿ ಮುಗಿಬಿದ್ದ ಜನ ಕೈಗೆ ಸಿಕ್ಕಷ್ಟು ದೋಚಿಕೊಂಡು ಹೋದರು. ಹಲವರು ಪರಸ್ಪರ ಜಗಳ ಮಾಡುತ್ತಲೇ ಲಾರಿ ಹತ್ತಿ ಬಾಟಲಿ ಎತ್ತಿಕೊಳ್ಳುವಲ್ಲಿ ಸಫಲರಾದರು.

ನೂರಾರು ಜನ ಜಮಾಯಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಒಬ್ಬೊಬ್ಬರು ನಾಲ್ಕೈದು ಬಿಯರ್ ಬಾಟಲಿ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಜನರನ್ನು ಚದುರಿಲು ಲಾಠಿ ಏಟು ಕೊಟ್ಟರೂ ಬಗ್ಗದ ಜನ ಕೈಗೆ ಸಿಕ್ಕಷ್ಟು ಬಿಯರ್​ ಎತ್ತಿಕೊಂಡು ಹೋದರು.

ಬಿಯರ್​ ಬಾಟಲಿ ಎತ್ತಿಕೊಳ್ಳಲು ಜನರು ಮುಗಿಬಿದ್ದ ದೃಶ್ಯ ನೋಡಲು ವಿಜಯವಾಣಿ ಫೇಸ್​ಬುಕ್​ ಲಿಂಕ್​ ಅನ್ನು ಕ್ಲಿಕ್​ ಮಾಡಿ  https://www.facebook.com/VVani4U/videos/256304799538378