ನ್ಯೂಸ್

ರಾತ್ರಿ ಸಂಚಾರ ಬಂದ್​: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು

ಚಾಮರಾಜನಗರ: ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ-948 ರಾತ್ರಿ ಸಂಚಾರ ನಿರ್ಬಂಧದ ಹಿನ್ನೆಲೆ ನಗರದಲ್ಲೇ ಉಳಿದಿದ್ದ ವಾಹನಗಳು ಶಕ್ರವಾರ ಬೆಳಗ್ಗೆ ಚೆಕ್ ಪೋಸ್ಟ್ ತೆರೆಯುತ್ತಿದ್ದಂತೆ ತಮಿಳುನಾಡಿನ ತೆರಳಲು ಸಾಲುಗಟ್ಟಿ ನಿಂತಿವೆ.

ಬೆಳಗ್ಗೆ 6 ಗಂಟೆಯಿಂದ ಸಂಚಾರಕ್ಕೆ ಅವಕಾಶವಿದ್ದು, 50ಕ್ಕೂ ಹೆಚ್ಚು ಭಾರಿ ವಾಹನಗಳು ಹೆದ್ದಾರಿಯಲ್ಲಿ ನಿಂತಿವೆ. ಒಂದರ ಹಿಂದೊಂದು ಗಾಡಿ ಜಮಾವಣೆಗೊಂಡು ಸಾಗುವ ವೇಗ ತಗ್ಗಿದೆ. ತಮಿಳುನಾಡಿನ ಬಣ್ಣಾರಿ ಚೆಕ್ ಪೋಸ್ಟ್​ನಲ್ಲೂ ಇದೇ ಪರಿಸ್ಥಿತಿ ಇದೆ ಎಂದು ತಿಳಿದು ಬಂದಿದೆ.

ದಿಂಬಂ- ಬಣ್ಣಾರಿ ಘಾಟ್​ನಲ್ಲಿ ತೀವ್ರ ತಿರುವುಗಳಿವೆ. ರಸ್ತೆ ಕಿರಿದಾಗಿದೆ. ರಾತ್ರಿಯಿಂದ ಕಾಯುತ್ತಿರುವ ಮತ್ತು ಬೆಳಗ್ಗೆ ಆಗಮಿಸುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.