ಚಾಮರಾಜನಗರ: ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಗುಂಡ್ಲುಪೇಟೆ ಪಣ್ಣಣದಲ್ಲಿ ಏರ್ಪಡಿಸಿದ್ದ ಬೃಹತ್ ವೇದಿಕೆ ಕಾರ್ಯಕ್ರಮಕ್ಕ ಆಗಮಿಸಿದ ರಾಹುಲ್ಗಾಂಧಿ ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ನಡೆಯಲಿರುವ 21 ದಿಗಳ ಯಾತ್ರಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ರಾಹುಲ್ಗಾಂಧಿ ಅವರ ಎಡ-ಬಲ ಭಾಗದಲ್ಲಿ ನಿಂತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಾಥ್ ಕೊಟ್ಟರು. ಈ ವೇಳೆ ಸಿದ್ದು- ಡಿಕೆಶಿ ಅವರಿಬ್ಬರ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸಿ ಇವರಿಬ್ಬರೂ ಒಂದೇ. ಬಣ ರಾಜಕೀಯ ಇಲ್ಲ ಎಂದು ಸಂದೇಶ ಸಾರಿದರು. ಸಿದ್ದರಾಮೋತ್ಸವ ವೇದಿಕೆಯಲ್ಲಿ ರಾಹುಲ್ ಕೈ ಸನ್ನೆ ಮೇರೆಗೆ ಸಿದ್ದು ಮತ್ತು ಡಿಕೆಶಿ ಅವರಿಬ್ಬರೂ ಪರಸ್ಪರ ಅಪ್ಪಿಕೊಂಡಿದ್ದನ್ನು ಸ್ಮರಿಸಬಹುದು.
ಇನ್ನು ವೇದಿಕೆ ಆಗಮಿಸಿದ ಸಾಹಿತಿ ದೇವನೂರು ಮಹದೇವ ಅವರ ನೇತೃತ್ವದ ತಂಡ ರಾಹುಲ್ ಗಾಂಧಿಗೆ ಸಂವಿಧಾನದ ಪ್ರಿಯಾಂಬಲ್ ನೀಡಿ ಶುಭ ಹಾರೈಸಿದರು. ಬಳಿಕ ರಾಹುಲ್ಗಾಂಧಿ ನೇತೃತ್ವದಲ್ಲಿ ಸಹಸ್ರಾರು ಜನರು ಪಾದಯಾತ್ರೆ ಹೊರಟಿದ್ದಾರೆ. ದಾರಿಯುದ್ದಕ್ಕೂ ಜಾನಪದ ಕಲಾತಂಡಗಳು ಯಾತ್ರೆಗೆ ಮೆರುಗು ನೀಡುತ್ತಿವೆ. ಕಾರ್ಯಕರ್ತರು ಕಾಂಗ್ರೆಸ್ ಪರ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.