ನ್ಯೂಸ್

ಇಂದು ಬೆಳ್ಳಂಬೆಳಗ್ಗೆ ಪಿಎಫ್​ಐ ಮೇಲೆ ಪೊಲೀಸರ ದಾಳಿ: ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್​ ಹೇಳಿದ್ದೇನು?

arunakunigal

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸರು ಪಿಎಫ್​ಐ ಸಂಘಟನೆಗೆ ಇಂದು ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟಿದ್ದಾರೆ. ಏಕಕಾಲಕ್ಕೆ ರಾಜ್ಯಾದ್ಯಂತ ದಾಳಿ ಮಾಡಿ ಹಲವರನ್ನ ವಶಕ್ಕೆ ಪಡೆದು ಕಾನೂನು ಸುವ್ಯವಸ್ಥೆ ಕದಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ, ಕೆಲವರನ್ನು ಬಂಧಿಸಿದ್ದಾರೆ. ಈ ಕುರಿತು ಎಡಿಜಿಪಿ ಅಲೋಕ್​ ಕುಮಾರ್​ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿ ನೀಡಿದ್ದಾರೆ.

80 ಜನರನ್ನು ವಶಕ್ಕೆ ಪಡೆದಿದ್ದೇವೆ. ಡಾಕ್ಯುಮೆಂಟ್ ಸೀಜ್ ಮಾಡಿಲ್ಲ. ಎನ್​ಐಎ ದಾಳಿಗೂ ಇದಕ್ಕೂ ಸಂಬಂಧ ಇಲ್ಲ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ದಾಳಿ ಮಾಡಿದ್ದೇವೆ. ಕರ್ನಾಟಕದಲ್ಲಿ ಲಾ ಆ್ಯಂಡ್ ಆರ್ಡರ್ ಕೆಡಿಸುವಂತಹವರ ಮೇಲೆ ದಾಳಿ ಮಾಡಲಾಗಿದೆ ಎಂದರು.

ಪಿಎಫ್ಐ ಹಾಗೂ ಎಸ್​ಡಿಪಿಐ ಮುಖಂಡರನ್ನು ವಶಕ್ಕೆ ಪಡೆದಿದ್ದೇವೆ. ಅಂತಹವರಿಗೆ ಎರಡು ಬಾಂಡ್ ಕೊಡಬೇಕು. ಒಂದು ಅವರ ಮನೆಯವರು, ಇನ್ನೊಂದು ಬಾಂಡ್​ ಅನ್ನು ಸರ್ಕಾರಿ ನೌಕರರು ಯಾರದಾರು ಅವರ ಪರವಾಗಿ ನೀಡಬೇಕು‌. ಆ ನಂತರ ಅವರನ್ನು ತಹಸೀಲ್ದಾರ್ ಅವರ ಮುಂದೆ ಕರೆದೊಯ್ಯಲಾಗತ್ತೆ. ಇದೀಗ ತನಿಖೆ ಹಂತದಲ್ಲಿದೆ. ಮುಂದೆ ಇನ್ಯಾರಾದರು ಅಕ್ರಮ ಎಸಗಿದ್ದಾರೆ ಅಂತ ಗೊತ್ತಾದ್ರೆ ಅಂತಹವರ‌ ವಿರುದ್ಧವೂ ಕ್ರಮ ಕೈಗೊಳ್ಳುತ್ತೀವಿ ಎಂದರು.