ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾಥಿರ್ಗಳಿಗೆ ನೀಡುವ ಪ್ರೋತ್ಸಾಹಧನವನ್ನು ಖಾತೆಗೆ ಜಮಾ ಮಾಡಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಜೋಡಣೆ ಮಾಡಿರುವ ಖಾತೆ ವಿವರವನ್ನೇ ನೀಡಬೇಕೆಂದು ವಿದ್ಯಾಥಿರ್ಗಳಿಗೆ ಇಲಾಖೆ ಸೂಚಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾಸಿರಿ, ಮೆರಿಟ್ ಸ್ಕಾಲರ್ಶಿಪ್, ಶುಲ್ಕ ವಿನಾಯಿತಿ ಇತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಇಂಡಿಯಾಗೆ ಲಿಂಕ್ ಮಾಡಿಸುವಿಕೆ ಕಡ್ಡಾಯ.
ಇಲ್ಲವಾದರೆ, ವಿದ್ಯಾರ್ಥಿ ವೇತನವು ಬ್ಯಾಂಕ್ ಖಾತೆ ಜಮಾ ಆಗುವುದಿಲ್ಲ. ಈ ಹಿನ್ನೆಲೆ ಕೂಡಲೇ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ಗೆ ಜೋಡಣೆ ಮಾಡಬೇಕಿದೆ. ಬೆಂಗಳೂರು ವಿಭಾಗದವರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9986872438, 9980119017 ಸಂಪರ್ಕಿಸಬಹುದು.