ನವದೆಹಲಿ: 71 ವರ್ಷ ಉಗಾಂಡಾದ ವ್ಯಕ್ತಿಯೊಬ್ಬರು ಮಹಿಳೆಯರಿಗೆ ತುಂಬಾ ಹೆದರುತ್ತಾರೆ. ಹೆಂಗಸರ ಜತೆ ಮಾತಾಡಬೇಕಾಗುತ್ತದೆ ಎನ್ನುವ ಭಯದಿಂದ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಆ ಭಯದಿಂದಲೇ 55 ವರ್ಷಗಳಿಂದ ಮನೆಯಲ್ಲೇ ಬದುಕುತ್ತಿದ್ದಾರೆ. ಇದೇನು ವಿಚಿತ್ರ ಘಟನೆ ಅಂತೀರಾ? ಬನ್ನಿ ಈ ವ್ಯಕ್ತಿ ಹೀಗೆ ಆಗಿದ್ಯಾಕೆ? ಮತ್ತೆ ಇವನ ಜೀವನ ಹೇಗೆ ನಡೆಸುತ್ತಾನೆ ಎನ್ನುವ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ಈತ ತನ್ನ ಮನೆಯ ಸುತ್ತ 15 ಅಡಿ ಎತ್ತರದ ಬೇಲಿಯನ್ನು ನಿರ್ಮಿಸಿದ್ದಾನೆ. ತೀರಾ ಅವಸರವಾದರೆ ಮನೆಯಿಂದ ಹೊರಗೆ ಬರುವುದಿಲ್ಲ. ಬಂದರೂ ತನ್ನ ಮನೆಯ ಮುಂದಿರುವ ಬೇಲಿ ದಾಟಿ ಹೊರಗೆ ಬರುವುದಿಲ್ಲ. ಹೆಂಗಸರು ಕಂಡರೆ ಮನೆಯೊಳಗೆ ನುಗ್ಗಿ ಬಾಗಿಲು ಹಾಕಿಕೊಳ್ಳುತ್ತಾನೆ. 16ನೇ ವಯಸ್ಸಿನಿಂದಲೂ ಹೀಗೆಯೇ ಜೀವನ ಸಾಗಿಸುತ್ತಿದ್ದಾನೆ. ಹೆಣ್ಣಿನ ಮೇಲಿನ ಭಯದಿಂದ ಮದುವೆಯೂ ಆಗದೆ ಒಂಟಿಯಾಗಿ ಬದುಕುತ್ತಿದ್ದಾನೆ ಈ ವ್ಯಕ್ತಿ.
ಈ ವಿಚಿತ್ರ ವ್ಯಕ್ತಿಯ ಹೆಸರು 'ಕ್ಯಾಲಿಟ್ಸೆ ನ್ಜಾಮ್ವಿತಾ'. ಅವರು ಆಫ್ರಿಕಾದ ಉಗಾಂಡಾದ ನಿವಾಸಿಯಾಗಿದ್ದಾನೆ. 55 ವರ್ಷಗಳಿಂದ ಮನೆಯಲ್ಲಿ ವಾಸಿಸುತ್ತಿದ್ದಾನೆ. ತೀರಾ ಅನಿವಾರ್ಯತೆ ಹೊರತು ಮನೆಯಿಂದ ಹೊರಗೆ ಬರುವುದಿಲ್ಲ. ಬಂದರು ಮನೆಯ ಸುತ್ತ ಕಟ್ಟಿರುವ 15 ಅಡಿ ಬೇಲಿಯಿಂದ ಹೊರಗೆ ಕಾಲಿಡುವುದಿಲ್ಲ. ಇದಕ್ಕೆ ಕಾರಣ ಮಹಿಳೆಯರ ಮೇಲಿನ ವಿಪರೀತ ಭಯ.
ಅಕ್ಕಪಕ್ಕದ ಮನೆಯವರು ಕೂಡ ಮನೆಯಿಂದ ಹೊರಗೆ ಬರುವುದನ್ನು ನೋಡಿಲ್ಲ. ಅವನ ಈ ವಿಚಿತ್ರ ಭಯದಿಂದಾಗಿ ಅವನು ಹೆಂಗಸರು ಮಾತ್ರವಲ್ಲದೆ ಪುರುಷರಿಂದ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಾನೆ.
ಕ್ಯಾಲಿಟ್ಸೆ ನ್ಜಾಮ್ವಿತಾ 55 ವರ್ಷದಿಂದ ಮನೆಯಲ್ಲಿಯೇ ಇದ್ದು ಜೀವನ ಸಾಗಿಸುತ್ತಿದ್ದಾನೆ. ಅವನು ಬದುಕಲು ಅಗತ್ಯವಾದ ವಸ್ತುಗಳನ್ನು ಹೇಗೆ ಪಡೆಯುತ್ತಾನೆ? ಆದರೆ ಹೆಣ್ಣಿನ ಬಗ್ಗೆ ವಿಪರೀತ ಭಯವಿರುವ ಕ್ಯಾಲಿಟೆಕ್ಸ್ ಸುತ್ತಮುತ್ತಲಿನ ಮಹಿಳೆಯರೇ ಬೇಕಾದ ಸಾಮಾಗ್ರಿಗಳನ್ನು ಪೂರೈಸುತ್ತಾರೆ. ಅಕ್ಕಪಕ್ಕದ ಹೆಂಗಸರು ಅವನ ಕಷ್ಟವನ್ನು ನೋಡಲಾರದೆ ಅಗತ್ಯ ವಸ್ತುಗಳನ್ನು ತಂದು ಮನೆಯ ಕಟ್ಟೆಯೊಳಗೆ ಎಸೆದು ಸಹಾಯ ಮಾಡುತ್ತಾರೆ. ಅವರು ಹೋದರು ಎಂದು ಖಚಿತಪಡಿಸಿಕೊಂಡ ನಂತರ, ಅವನು ನಿಧಾನವಾಗಿ ಹೊರಬಂದು ಸಾಮಾನುಗಳ ಚೀಲವನ್ನು ತೆಗೆದುಕೊಂಡು ಮನೆಯೊಳಗೆ ಓಡಿ ಬಾಗಿಲು ಹಾಕುತ್ತಾನೆ.
ಈ ವಿಚಿತ್ರ ವ್ಯಕ್ಯಿಯನ್ನು ಮಾಧ್ಯಮವೊಂದು ಸಂದರ್ಶನ ನಡೆಸಿದಾಗ, ನನ್ನ ಮನೆಗೆ ಮಹಿಳೆಯರು ಬರದಂತೆ ಎತ್ತರದ ಬೇಲಿ ನಿರ್ಮಿಸಿದ್ದೇನೆ, ಏಕೆಂದರೆ ನನ್ನ ಮನೆಗೆ ಮಹಿಳೆಯರು ಪ್ರವೇಶಿಸುವುದನ್ನು ತಡೆಯುತ್ತೇನೆ ಎಂದಿದ್ದಾನೆ.
ಈತ ಹೆಣ್ಣಿನ ಬಗ್ಗೆ ಭಯಪಡಲು ಕಾರಣ: ಇವನ ಈ ವಿಚಿತ್ರ ಭಯಕ್ಕೆ ‘ಗೈನೋಫೋಬಿಯಾ’ ಎನ್ನುತ್ತಾರೆ ಮನಶಾಸ್ತ್ರಜ್ಞರು. ಈ ಸಮಸ್ಯೆ ಇರುವವರು, ಮಹಿಳೆಯರು ಜೊತೆ ಮಾತನಾಡುವುದಕ್ಕಷ್ಟೇ ಅಲ್ಲ ಅವರನ್ನು ನೋಡುವುದಕ್ಕೂ ಹೆದರುತ್ತಾರೆ. ಹೀಗಿರುವಾಗ ಮಹಿಳೆಯರನ್ನು ಕಂಡರೆ ಉಸಿರಾಡಲು ಕಷ್ಟವಾಗುತ್ತದೆ. ದೇಹ ಬೆವರುತ್ತದೆ. ಕೆಲವರು ನೀರಿಗೆ ಹೆದರುತ್ತಾರೆ, ಕೆಲವರು ಬೆಂಕಿಗೆ ಹೆದರುತ್ತಾರೆ, ಕೆಲವರು ಕತ್ತಲೆಗೆ ಹೆದರುತ್ತಾರೆ. ಆದ್ದರಿಂದ ಅವರ ಅವರ ಮಾನಸಿಕ ಸ್ಥಿತಿಯನ್ನು ಅವಲಂಬಿಸಿ, ಅವರು ಆ ಭಯವನ್ನು ಹೊಂದಿರುತ್ತಾರೆ. ಆದರೆ ಬಹುಶಃ ಈ ವಿಚಿತ್ರ ಪುರುಷನು ಮಹಿಳೆಯರ ಬಗ್ಗೆ ಅಂತಹ ವಿಪರೀತ ಭಯವನ್ನು ಹೊಂದಿದ್ದಾನೆ ಎಂದಿದ್ದಾರೆ.