ನ್ಯೂಸ್

102 ಗ್ರಾಮ ಲೆಕ್ಕಿಗ ಹುದ್ದೆಗೆ 41 ಸಾವಿರ ಅರ್ಜಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ 102 ಗ್ರಾಮ ಲೆಕ್ಕಿಗ ಹುದ್ದೆಗಳನ್ನು ನೇರ ನೇಮಕಾತಿಯಲ್ಲಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ವಿವಿಧ ಭಾಗಗಳಿಂದ 41,162 ಅರ್ಜಿಗಳು ಆನ್​ಲೈನ್​ ಪೋರ್ಟಲ್​ ಮೂಲಕ ಸಲ್ಲಿಕೆಯಾಗಿವೆ. 87 ಜನ ಪೂರ್ಣಾಂಕ ಪಡೆದವರಿದ್ದಾರೆ. ಎಲ್ಲ ಅಂಕಪಟ್ಟಿಗಳನ್ನು ಪರಿಶೀಲಿಸಿ ದೃಢೀಕರಿಸುವಂತೆ ಪಿಯು ಬೋರ್ಡ್​ಗೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್​ ತಿಳಿಸಿದ್ದಾರೆ.