ನ್ಯೂಸ್

ನೀರು ತುಂಬಿದ ಬಕೆಟ್​ನಲ್ಲಿ ಬಿದ್ದು 4 ವರ್ಷದ ಮಗು ಸಾವು! | Girl

Girl: ನಾಲ್ಕು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮುಂಬೈನ ಮಲಾಡ್​ನಲ್ಲಿ ಇತ್ತೀಚೆಗೆ ನಡೆದಿದೆ.

ಅಕೃತಿ ಯಾದವ್ ಮೃತ ಮಗು ಎಂದು ತಿಳಿದುಬಂದಿದೆ. ಇನ್ನು ಆಕೆಯ ಮನೆಯಲ್ಲಿ ಸೀಮಿತ ಪೂರೈಕೆಯ ಸಮಯದಲ್ಲಿ ಆಕೆಯ ಕುಟುಂಬ ನೀರು ಸಂಗ್ರಹಿಸಿದಾಗ ಈ ಘಟನೆ ಸಂಭವಿಸಿದೆ. ಆಕೆಯನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಗು

ಅಕೃತಿ ಯಾದವ್ ಹಾಗೂ ಆಕೆಯ ಪಾಲಕರೊಂದಿಗೆ ಮಲಾಡ್ ಪೂರ್ವದ ರಾಜೀವ್ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದರು. ತಂದೆ ತಾಯಿಗಳಿಬ್ಬರೂ ದಿನಗೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪೊಲೀಸರ ಪ್ರಕಾರ, ಅಕೃತಿ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದಾಳೆ ಎಂದು ತಿಳಿಸಿದ್ದಾರೆ.

ಘಟನೆಯ ದಿನ ಪಾಲಕರು ಬಕೆಟ್​, ಡ್ರಮ್​ಗಳಲ್ಲಿ ನೀರು ತುಂಬಿ ಹೋಗಿದ್ದರು. ಈ ವೇಳೆ ಮಗು ನೀರು ತುಂಬಿದ ಬಕೆಟ್​ ಹತ್ತಿರ ಹೋಗಿ ಒಳಗೆ ತಲೆ ಕೆಳಗಾಗಿ ಬಿದ್ದಿದೆ. ಮನೆಯಲ್ಲಿ ಮಗು ಕಾಣದನ್ನು ಗಮನಿಸಿದ ತಾಯಿ ಮಗುವನ್ನು ಹುಡುಕಾಡಲು ಪ್ರಯತ್ನಿಸಿದ್ದು ಬಕೆಟ್​ನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾಳೆ. ಇನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದು, ಮಗು ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. (ಏಜೆನ್ಸೀಸ್​)