ಸಾಂದರ್ಭಿಕ ಚಿತ್ರ 
ನ್ಯೂಸ್

ಕ್ಯಾಂಡಿ ಆಸೆ ತೋರಿಸಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ! | crime

crime: ಮೂರು ವರ್ಷದ ಬಾಲಕಿಯ ಮೇಲೆ 22 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ (ಆಗಸ್ಟ್​ 29) ಉತ್ತರ ಪ್ರದೇಶದ ಸೋನ್​ಭದ್ರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು?

ಅಜ್ಜ ಅಜ್ಜಿಯನ್ನು ಭೇಟಿ ಮಾಡಲು ಸೋನ್​ಭದ್ರಗೆ ಬಂದಿದ್ದ ಬಾಲಕಿಗೆ ವ್ಯಕ್ತಿಯೊಬ್ಬ ಕ್ಯಾಂಡಿ ಆಸೆ ತೋರಿಸಿ ತನ್ನೆಡೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಮನೆಗೆ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಅನಿಲ್​ ಕುಮಾರ್​ ಪ್ರತಿಕ್ರಿಯಿಸಿದ್ದು, ಬಾಲಕಿಯ ಮನೆಯವರು ಈ ವಿಚಾರದ ಕುರಿತು ಮಹಿಳಾ ಸಹಾಯವಾಣಿ 1090 ಕರೆ ಮಾಡಿ, ಅತ್ಯಾಚಾರದ ಬಗ್ಗೆ ವರದಿ ಮಾಡಿದ್ದಾರೆ. ಹಾಗೇ ಪೊಲೀಸರು ಆರೋಪಿ ಬಲೆಗಾಗಿ ಪತ್ತೆ ಹಚ್ಚಿದ್ದಾರೆ. (ಏಜೆನ್ಸೀಸ್​)