ನ್ಯೂಸ್

ಸಮವಸ್ತ್ರ ಧರಿಸದೆ ಬಂದ್ರೆ 200 ರೂ. ದಂಡ! ಕಾಲೇಜು ಮುಂಭಾಗ ನೋಟಿಸ್​ ಅಂಟಿಸಿದ ಆಡಳಿತ ಮಂಡಳಿ

ಹಾಸನ: ಸಮವಸ್ತ್ರ ಧರಿಸದೆ ಕಾಲೇಜಿಗೆ ವಿದ್ಯಾರ್ಥಿಗಳು ಬರುವಂತಿಲ್ಲ. ಈ ನಿಮಯ ಉಲ್ಲಂಘಿಸಿ ಬಂದವರು 200 ರೂಪಾಯಿ ದಂಡ ಪಾವತಿಸಬೇಕು!

ಹೌದು, ಹೀಗಂತ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ನೋಟಿಸ್ ಅಂಟಿಸಲಾಗಿದೆ.

ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತ್ರ ಹಾಗೂ ಗುರುತಿನ ಪತ್ರ ಹಾಕಿಕೊಂಡು ತರಗತಿಗೆ ಹಾಜರಾಗಬೇಕು ಎಂದು ಆಡಳಿತ ಮಂಡಳಿ ಆದೇಶಿಸಿದೆ. ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮೊಬೈಲ್ ಬಳಸಿದರೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಶುಕ್ರವಾರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಪ್ರತಿಭಟನೆ ನಡೆಸಿದ್ದರು.