ಟೆಹ್ರಾನ್: ಪೆಟ್ರೋಲ್ ಅಥವಾ ಡೀಸೆಲ್ ಬದಲಿಗೆ ನೀರಿನಿಂದ ( Water ) ಚಲಿಸುವ ಕಾರು ಬಂದಿದೆ ಎಂದರೆ ನೀವು ನಂಬುತ್ತೀರಾ? ಈ ವಿಡಿಯೋ ನೋಡಿದ ಬಳಿಕ ನೀವು ನಂಬಲೇಬೇಕು. ಇರಾನಿನ ವಿಜ್ಞಾನಿ ಅಲಾವುದ್ದೀನ್ ಖಾಸೆಮಿ ಅವರು ಎರಡು ವರ್ಷಗಳ ಹಿಂದೆ ಹಂಚಿಕೊಂಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಬೇರ್ಪಡಿಸುವ ಮೂಲಕ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಖಾಸೆಮಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಖಾಸೆಮಿ ಅವರು ಸಸ್ಯಗಳಿಗೆ ನೀರುಣಿಸಲು ಬಳಸುವ ಸಾಮಾನ್ಯ ಪೈಪ್ ಅನ್ನು ಬಳಸಿಕೊಂಡು ತನ್ನ ಕಾರಿನ ಟ್ಯಾಂಕ್‌ಗೆ ನೀರು ತುಂಬಿಸುವುದನ್ನು ಕಾಣಬಹುದು. ವಾಹನದ ಇಂಜಿನ್ ಈ ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಪರಿವರ್ತಿಸಿ, ಅದರಿಂದ ಬರುವ ಶಕ್ತಿಯನ್ನು ಬಳಸಿಕೊಂಡು ವಾಹನವನ್ನು ಮುಂದಕ್ಕೆ ಚಲಿಸುತ್ತದೆ ಎಂದು ಖಾಸೆಮಿ ಅವರು ವಿವರಿಸಿದ್ದಾರೆ.
60 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಕಾರು, ಒಂದೇ ಒಂದು ಹನಿ ಇಂಧನ ಅಥವಾ ಬಾಹ್ಯ ಇಂಧನ ಮೂಲಗಳಿಲ್ಲದೆ 900 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು ಎಂದು ಖಾಸೆಮಿ ಅವರು ಹೇಳುತ್ತಾರೆ. ಅಲ್ಲದೆ, ಈ ವಾಹನವು ವಾಯು ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಇದು ನೀರಿನ ಆವಿಯನ್ನು ಮಾತ್ರ ಹೊರಸೂಸುತ್ತದೆ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಯಕತ್ವದಿಂದ ರಿಜ್ವಾನ್ ವಜಾ: ಪಾಕ್ ಏಕದಿನ ತಂಡಕ್ಕೆ ಹೊಸ ನಾಯಕ ನೇಮಕ! ಬದಲಾಗುತ್ತಾ ಲಕ್? Pakistan
ಆದರೆ, ವೈಜ್ಞಾನಿಕ ಲೋಕವು ಈ ಆವಿಷ್ಕಾರವು ಹೆಚ್ಚಿನ ಶಕ್ತಿಯ ಅಗತ್ಯವಿರುವ ಪ್ರಕ್ರಿಯೆ ಎಂದು ಹೇಳುತ್ತದೆ. ಆದರೆ, ವಿಡಿಯೋ ನೋಡಿದ ಅನೇಕರು ಇದೊಂದು ಕ್ರಾಂತಿಕಾರಿ ಆವಿಷ್ಕಾರ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಯಾವುದೇ ವರದಿ ಇನ್ನೂ ಬಿಡುಗಡೆಯಾಗಿಲ್ಲ.
ಇದೇ ರೀತಿ ಭಾರತೀಯ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಬರು ಮೋಟಾರ್ ಸೈಕಲ್ ಟ್ಯಾಂಕ್‌ಗೆ ನೀರು ಸುರಿದು ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. ಹಲವು ಪ್ರಯತ್ನಗಳ ನಂತರ ಅವರು ಬೈಕ್ ಅನ್ನು ಸ್ಟಾರ್ಟ್ ಮಾಡುವಲ್ಲಿ ಯಶಸ್ವಿ ಕೂಡ ಆದರು. ಆ ವಿಡಿಯೋದ ಸತ್ಯಾಸತ್ಯತೆ ಕೂಡ ಇನ್ನೂ ದೃಢಪಟ್ಟಿಲ್ಲ. (ಏಜೆನ್ಸೀಸ್)