ನ್ಯೂಸ್

ಸಹಪಾಠಿಗೆ ಚಾಕುವಿನಿಂದ ಇರಿದ 8ನೇ ಕ್ಲಾಸ್​ ವಿದ್ಯಾರ್ಥಿ! | Classmate

ಬಾಬುಪ್ರಸಾದ್​ ಮೋಡಿಸ್​

Classmate: ಶಾಲೆಯೊಂದ ಹೊರಗೆ ನಡೆದ ವಿದ್ಯಾರ್ಥಿಗಳ ಜಗಳದಲ್ಲಿ 8ನೇ ಕ್ಲಾಸ್​ ಸ್ಟೂಡೆಂಟ್​ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದ ಘಟನೆ ಗುಜರಾತ್​ನ ಮಹಿಸಾಗರ್​ ಜಿಲ್ಲೆಯ ಬಾಲಸಿನೋರ್​ ಪಟ್ಟಣದ ಶಾಲೆಯೊಂದರಲ್ಲಿ ಶುಕ್ರವಾರ ನಡೆದಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಗೇಟ್​ ಬಳಿ ನಡೆದ ಸಣ್ಣ ವಿವಾದಲ್ಲಿ 8ನೇ ತರಗತಿ ವಿದ್ಯಾರ್ಥಿ ಚಾಕುವಿನಿಂದ ಇರಿದ್ದಾನೆ. ಸಂತ್ರಸ್ತನ ತಂದೆ ನೀಡದ ದೂರಿನ ಆಧಾರದ ಮೇಲೆ ಆರೋಪಿ ಬಾಲಪರಾಧಿ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಎಸ್​ಪಿ ಜಯದೀಪ್ಸಿನ ಜಡೇಜಾ ತಿಳಿಸಿದ್ದಾರೆ.

ಸಂತ್ರಸ್ತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದು, ಅವನ ಸ್ಥಿತಿ ಸ್ಥಿರವಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

"ನನ್ನ ಮಗನ ಸಹಪಾಠಿ ಯಾವುದೋ ಸಣ್ಣ ವಿಷಯಕ್ಕೆ ಕೋಪಗೊಂಡು ಸಣ್ಣ ಚಾಕುವಿನಿಂದ ಇರಿದ. ನನ್ನ ಮಗನ ಬೆನ್ನು, ಹೊಟ್ಟೆ ಮತ್ತು ಭುಜದ ಬಳಿ ಇರಿದ ಗಾಯಗಳಾಗಿವೆ" ಎಂದು ಸಂತ್ರಸ್ತನ ತಂದೆ ಆರೋಪಿದ್ದಾರೆ.(ಏಜೆನ್ಸೀಸ್​)