ನ್ಯೂಸ್

ವಿಶ್ವದಾದ್ಯಂತ 8 ಲಕ್ಷ ಜನರಿಗೆ ಕರೊನಾ ಸೋಂಕು, ಸತ್ತವರ ಸಂಖ್ಯೆ 37,878ಕ್ಕೆ ಏರಿಕೆ

ನವದೆಹಲಿ: ವಿಶ್ವದ ನಾನಾ ಭಾಗಗಳಲ್ಲಿ ಇದುವರೆಗೂ ಒಟ್ಟು 8 ಲಕ್ಷಕ್ಕೂ ಹೆಚ್ಚು ಜನರಿಗೆ ಕರೊನಾ ವೈರಸ್​ ಸೋಂಕು ತಗುಲಿದೆ.

ಅಮೆರಿಕದ ಮೇರಿಲ್ಯಾಂಡ್​ನ ಬಾಲ್ಟಿಮೋರ್​ನಲ್ಲಿರುವ ಜಾನ್​ ಹಾಪ್​ಕಿನ್ಸ್​ ಕರೊನಾ ವೈರಸ್​ ರಿಸೋರ್ಸ್​ ಸೆಂಟರ್​ನ ಪ್ರಕಾರ ಇದುವರೆಗೆ 8,01,400 ಜನರು ಕರೊನಾ ವೈರಸ್​ ಸೋಂಕಿಗೆ ತುತ್ತಾಗಿದ್ದಾರೆ. ಇವರಲ್ಲಿ 1,65,692 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಒಟ್ಟು 38,742 ಜನರು ಮೃತಪಟ್ಟಿದ್ದಾರೆ.

ಇಟಲಿ ಮತ್ತು ಸ್ಪೇನ್​ನಲ್ಲಿ ಒಂದೇ ದಿನ ನೂರಾರು ಜನ ಮೃತಪಟ್ಟಿದ್ದಾರೆ. ಅಮೆರಿಕದಲ್ಲೂ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದೆ.