Baby Vipers: ನಿನ್ನೆ (ಏ.21) ರಾತ್ರಿ ಮನೆಯಲ್ಲಿ ದೊಡ್ಡ ಮಂಡಲ ಹಾವು ಸಂಚರಿಸಿರುವುದನ್ನು ಮನೆಯ ಶ್ವಾನ ಪತ್ತೆಹಚ್ಚಿದ್ದು, ಶ್ವಾನಗಳ ವಿಪರೀತ ಬೊಗಳುವಿಕೆಗೆ ಗಲಿಬಿಲಿಗೊಂಡ ಕುಟುಂಬಸ್ಥರು, ಮನೆಯ ಸುತ್ತಮುತ್ತ ಹಾವಿನ ಸಂಚಾರವನ್ನು ದೃಢಪಡಿಸಿಕೊಂಡಿದ್ದಾರೆ. ತಕ್ಷಣವೇ ಭಯಭೀತರಾದ ಬಿಂದು ಎಂಬುವವರು, ಸ್ಥಳೀಯ ಉರಗ ತಜ್ಞರಿಗೆ ಮಾಹಿತಿ ನೀಡಿ, ಹಾವಿನ ಮರಿಗಳನ್ನು ಸೆರೆಹಿಡಿಸಿದ್ದಾರೆ.
ಇದನ್ನೂ ಓದಿ: ಇದೇ ಪಾಕಿಸ್ತಾನದಲ್ಲಿ ಜನರು… ಆರ್ಆರ್ ಯುವ ಬ್ಯಾಟರ್ ಕುರಿತು ಬಸಿತ್ ಅಲಿ ಓಪನ್ ಟಾಕ್ | Vaibhav Suryavanshi
ಕೇರಳದ ಪಲೋಡೆಯ ರಾಹುಲ್ ಭವನದಲ್ಲಿರುವ ಬಿಂದು ಎಂಬುವರರ ಮನೆಯಲ್ಲಿ ಬೃಹತ್ ಗಾತ್ರದ ಮಂಡಲದ ಹಾವು 75ಕ್ಕೂ ಹೆಚ್ಚು ಮರಿಗಳಿಗೆ ಜನ್ಮ ನೀಡಿದೆ. ನಂದಿ ಎಂಬಾತ ಮನೆಯಲ್ಲಿ ಹಾವಿಗಾಗಿ ಎಷ್ಟೇ ಹುಡುಕಾಡಿದರೂ ಹಾವಿನ ಸುಳಿವು ಸಿಕ್ಕಿಲ್ಲ. ಸತತ 8 ಗಂಟೆಗಳ ಶೋಧದ ನಂತರ 75ಕ್ಕೂ ಅಧಿಕ ಮಂಡಲ ಹಾವಿನ ಮರಿಗಳು ಪತ್ತೆಯಾಗಿವೆ.
ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ನಡೆಸಿದ ಹುಡುಕಾಟದ ಬಳಿಕ ಮಂಡಲ ಹಾವಿನ ಮರಿಗಳು ಪತ್ತೆಯಾಗಿದೆ. ಅವು ವಿಷಪೂರಿತ ಆದ ಹಿನ್ನೆಲೆ ಮರಿಗಳನ್ನು ಸೆರೆಹಿಡಿದು, ಪಲೋಡೆ ಅರಣ್ಯ ಇಲಾಖೆಗೆ ಬಿಡಲಾಯಿತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).