ನ್ಯೂಸ್

ಟೋಫಿ ಧರಿಸಿ ಶಾಲೆಗೆ ಬಂದಿದಕ್ಕೆ 6ನೇ ತರಗತಿ ವಿದ್ಯಾರ್ಥಿಗೆ ಥಳಿತ; ಟೀಚರ್​ ವಿರುದ್ಧ ದಾಖಲಾಯ್ತು FIR​

ಉತ್ತರ ಪ್ರದೇಶ: ಟೋಫಿ ಧರಿಸಿ ಶಾಲೆಗೆ ಬಂದಿದ್ದ ಕಾರಣದಿಂದ 6ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ಆರೋಪದ ಮೇಲೆ ಇಲ್ಲಿನ ಬಲ್ಲಿಯಾಲ ಕಾನ್ವೆಂಟ್​ ಶಾಲೆಯ ಶಿಕ್ಷಕನ ಮೇಲೆ ಎಫ್​​ಐಆರ್(FIR​)​ ದಾಖಲಾಗಿದೆ.

ಇದೇ ಡಿ.20ರಂದು ಈ ಘಟನೆ ನಡೆದಿದ್ದು, ಡಿ.26ರಂದು ಜೈಪ್ರಕಾಶ್​ ನಗರದ ಅನಿಲ್​ ಕುಮಾರ್​ ಗುಪ್ತ ನೀಡಿದ ದೂರಿನ ಮೇಲೆ ಶಾಲೆಯ ಶಿಕ್ಷಕ ಜಿತೇಂದ್ರರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಗು ಶಾಲೆಗೆ ಟೋಫಿ ಧರಿಸಿದ್ದಾಕ್ಕಾಗಿ ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಮನಬಂದಂತೆ ನಿಂದಿಸಿದ್ದಾನೆ. ಅಲ್ಲದೆ, ಗೋಡೆಗೆ ತಳ್ಳಿ ಥಳಿಸಿದ್ದಾನೆ. ತಲೆಗೆ ಹೊಡೆದಿದ್ದಾನೆ. ಮರುದಿನ ಈ ಘಟನೆಯ ಬಗ್ಗೆ ಮಗುವಿನ ತಂದೆ ಅನಿಲ್​ ಕುಮಾರ್​ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದಾನೆ. ದೂರು ಹಿನ್ನೆಲೆ ಮತ್ತೆ ಹೊಡೆದಿದ್ದಾನೆ ಎಂದು ತಂದೆ ಆರೋಪಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನಿ ತನಿಖೆ ಮಾಡಲಾಗುವುದು ಎಂದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣ ದಾಖಲು

ಇದೇ ರೀತಿಯ ಘಟನೆಯ ಪುಣೆಯಲ್ಲಿ ನಡೆದಿದ್ದು, ಖಾಸಗಿ ಶಾಲೆಯೊಂದರ ಶಿಕ್ಷಕನು ತನ್ನ ಶರ್ಟ್​ ಅನ್ನು 6 ನೇ ತರಗತಿಯ ವಿದ್ಯಾರ್ಥಿ ಹಾಕಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಮಗುವನ್ನು ಥಳಿಸಿ ಗಾಯಗೊಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಸಂದೇಶ್ ಭೋಸಲೆ (26) ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್ 27 ರಂದು ಕಂಪ್ಯೂಟರ್ ತರಗತಿಯ ವೇಳೆ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ,(ಏಜೆನ್ಸೀಸ್​).