ನ್ಯೂಸ್

ಮಾ.25ರಿಂದ ಜುಲೈವರೆಗೆ 66 ಅಪ್ರಾಪ್ತರ ಆತ್ಮಹತ್ಯೆ; ಕಾರಣ ತಿಳಿಯದೆ ಆತಂಕಕ್ಕೀಡಾಗಿದೆ ಸರ್ಕಾರ

ಕೊವಿಡ್​-19 ಶುರುವಾದಾಗಿನಿಂದ ಕಾಯಿಲೆಯಿಂದ ಮೃತಪಟ್ಟವರು ಒಂದಷ್ಟು ಮಂದಿಯಾದರೆ, ಖಿನ್ನತೆ ಮತ್ತಿತರ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೂ ದೊಡ್ಡದಾಗಿದೆ

ಇದೀಗ ಕೇರಳದಿಂದ ಹೊರಬಿದ್ದ ವರದಿಯೊಂದು ನಿಜಕ್ಕೂ ಆತಂಕ ಮೂಡಿಸುವಂತಿದೆ. ಕರೊನಾ ವೈರಸ್​ ಲಾಕ್​ಡೌನ್​ ಶುರುವಾದ ಮಾರ್ಚ್​ 25ರಿಂದ ಇಲ್ಲಿಯವರೆಗೆ ಕೇರಳದಲ್ಲಿ ಸುಮಾರು 66 ಅಪ್ರಾಪ್ತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಇವರೆಲ್ಲರೂ 18ವರ್ಷ ಒಳಗಿನವರೇ ಆಗಿದ್ದಾರೆ ಎಂದು ಹೇಳಲಾಗಿದೆ. ಕೇರಳ ಸರ್ಕಾರ ಹಿರಿಯ ಐಪಿಎಸ್​ ಅಧಿಕಾರಿ ಆರ್​. ಶ್ರೀಕಲಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದ್ದು, ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ನಡೆದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಲು ಸೂಚಿಸಿದೆ. ಅಲ್ಲದೆ, ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆಯೂ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಹೇಳಿದೆ. ಇದನ್ನೂ ಓದಿ: ಕ್ರಿಮಿನಲ್​ ವಿಕಾಸ್​ ದುಬೆಯ ಪತ್ನಿ, ಮಗನೂ ಅರೆಸ್ಟ್​…

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಕರೊನಾ ನಿಯಂತ್ರಣವನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಇಂದು ಒಂದೇ ದಿನ 339 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕರೊನಾ ಪ್ರಕರಣಗಳ ಸಂಖ್ಯೆ 6534ಕ್ಕೆ ಏರಿದೆ. (ಏಜೆನ್ಸೀಸ್​)