ಬೆಂಗಳೂರು: ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಲೇ ಇದೆ. ಈ ಹಿಂದೆ ಹಸಿರು ಝೋನ್ನಲ್ಲಿದ್ದ ಜಿಲ್ಲೆಗಳೆಲ್ಲ ರೆಡ್ ಝೋನ್ಗೆ ಮಾರ್ಪಾಡಾಗುತ್ತಿವೆ. ಒಂದೂ ಕೇಸ್ಗಳು ಇಲ್ಲದ ಪ್ರದೇಶದಲ್ಲೆಲ್ಲ ಈಗೀಗ ಕಾಣಿಸಿ ಕೊಳ್ಳುತ್ತಿದೆ.
ಇದನ್ನೂ ಓದಿ: VIDEO: ಹೆದ್ದಾರೀಲಿ ಕುದುರೆ ಸವಾರಿ ಮಾಡಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಎಂಎಲ್ಎ ಪುತ್ರ…!
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 63 ಹೊಸ ಕರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಅಲ್ಲಿಗೆ ಒಟ್ಟು ಸೋಂಕಿತರ ಸಂಖ್ಯೆ 925ಕ್ಕೆ ಏರಿದೆ.
ಇಲ್ಲಿಯವರೆಗೆ 31 ಮಂದಿ ಕರೊನಾದಿಂದ ಮೃತಪಟ್ಟಿದ್ದು, 433 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಾವಣಗೆರೆಯಲ್ಲಂತೂ ಒಂದೇ ದಿನದಲ್ಲಿ 12 ಕೇಸ್ಗಳು ಪತ್ತೆಯಾಗಿದ್ದು, ಇಷ್ಟುದಿನ ಸೇಫ್ ಆಗಿದ್ದ ಕೋಲಾರದಲ್ಲಿ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಗದಗ, ಬಾಗಲಕೋಟೆ, ಹಾಸನಗಳಲ್ಲೂ ಸಹ ಕೊರನಾ ಪ್ರಮಾಣ ಜಾಸ್ತಿ ಇದೆ.