ನ್ಯೂಸ್

ಒಂದಲ್ಲ, ಎರಡಲ್ಲ ಮೂರು ಮಕ್ಕಳಿಗೆ 62ರ ಪ್ರಾಯದಲ್ಲಿ ತಂದೆಯಾಗಿ ಬಡ್ತಿ ಪಡೆದ

- ತ್ರಿವಳಿಗೆ ಜನ್ಮ ನೀಡಿದ 2ನೇ ಪತ್ನಿ

ಮಧ್ಯಪ್ರದೇಶ: 62ರ ಪ್ರಾಯದಲ್ಲಿ ವ್ಯಕ್ತಿಯೊಬ್ಬ 2ನೇ ಪತ್ನಿಯ ಮೂಲಕವಾಗಿ ಮೂರು ಮಕ್ಕಳಿಗೆ ತಂದೆಯಾಗಿದ್ದಾನೆ.

ಮಧ್ಯಪ್ರದೇಶದ ಸತ್ನಾಗೆ ಜಿಲ್ಲೆಯ ಉಚೆಹ್ರಾ ಬ್ಲಾಕ್‌ನ ಅತರ್ವೇದಿಯಾ ಖುರ್ದ್ ಗ್ರಾಮದ ನಿವಾಸಿ, 62 ವರ್ಷದ ಗೋವಿಂದ್ ಕುಶ್ವಾಹ್​​ನ  ಮೊದಲ ಹೆಂಡತಿಯ ಏಕೈಕ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದನು. ಮಗನ ಸಾವಿನಿಂದ ಗೋವಿಂದ ಕೊರಗುತ್ತಿದ್ದನ್ನು ನೋಡಿದ ಮೊದಲ ಪತ್ನಿ ಆತನಿಗೆ ಹೀರಾಬಾಯಿ ಜತೆಗೆ 2ನೇ ಮದುವೆ ಮಾಡಿದಳು.

ಸೋಮವಾರ ರಾತ್ರಿ ಹೀರಾಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಮನೆಯವರು ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸಿಸೇರಿಯನ್ ಮೂಲಕ ಹೀರಾಬಾಯಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ವೈದ್ಯರು ಮಾತನಾಡಿ, 'ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ 8 ತಿಂಗಳಿಗೆ ಜನಿಸಿದ್ದರಿಂದ ದುರ್ಬಲವಾಗಿವೆ. ಹೀಗಾಗಿ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ' ಎಂದು ಹೇಳಿದ್ದಾರೆ.

ವೃದ್ಧ ಗೋವಿಂದ್ ಮಾತನಾಡಿ, 'ನನ್ನ ಮೊದಲ ಹೆಂಡತಿಯಿಂದ ಮಗ 18ರ ಪ್ರಾಯದಲ್ಲಿ  ಆತ ಅಪಘಾತದಲ್ಲಿ ಸಾವನ್ನಪ್ಪಿದ, ಇದಾದ ಬಳಿಕ ತನ್ನ ಪತ್ನಿ ತನಗೆ ಹೀರಾಬಾಯಿ ಜೊತೆ 2ನೇ ಮದುವೆ ಮಾಡಿದ್ದಳು. ಈಗ ಮಕ್ಕಳು ಜನಿಸಿರುವುದು ಖುಷಿಯಾಗಿದೆ' ಎಂದು ಹೇಳಿದ್ದಾರೆ.