ಉತ್ತರ ಪ್ರದೇಶ: ವೇಗವಾಗಿ ಬಂದ ಬೊಲೆರೊ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುದ ಘಟನೆ ಉತ್ತರಪ್ರದೇಶದ ಬಂದಾ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಮೆಕ್ಸಿಕೋದಲ್ಲಿ ಹೀಟ್ವೇವ್ಗೆ 100ಕ್ಕೂ ಹೆಚ್ಚು ಜನ ಮೃತ!
ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ತಿಲೌತಾ ಗ್ರಾಮದ ನಿವಾಸಿ ಗುಜ್ಜಿ ಎಂಬಾತನ ಮಗ ಕಲ್ಲು ರಾತ್ರಿ ಒಂಬತ್ತರ ಸುಮಾರಿಗೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾನೆ. ಕೂಡಲೇ ಆತನನ್ನು ಕರೆದುಕೊಂಡು ಕಲ್ಲುನ ತಾಯಿ ಸರ್ಬಾನೊ, ಮಕ್ಕಳಾದ ಕೈಫ್, ಚಿಕ್ಕಿ, ಚಾಲಕ ಹಸೀಂ ಸೇರಿ 8 ಮಂದಿ ಆಸ್ಪತ್ರೆಗೆ ಹೋಗುತ್ತಿದ್ದರು.
ಈ ವೇಳೆ ಕೊತ್ವಾಲಿ ಪ್ರದೇಶದ ಕಮಾಸಿನ್ ರಸ್ತೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ಗೆ ಬೊಲೆರೊ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತ್ತಿದ್ದಾನೆ. ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: ಮೊದಲ ಡೇಟಿಂಗ್ನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದೀರಾ? ತಮನ್ನಾಗಿಂತ ವಿಜಯ್ ಕೊಟ್ಟ ಉತ್ತರ ವೈರಲ್!
ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ದುರ್ಗಾಶಕ್ತಿ ನಾಗಪಾಲ್ ತಿಳಿಸಿದ್ದಾರೆ.(ಏಜೆನ್ಸೀಸ್)