ಕೆಲವೊಮ್ಮೆ ನಕರಾತ್ಮಕ ಅಭ್ಯಾಸಗಳು ಅಥವಾ ಹವ್ಯಾಸಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು. ಹಾಗಾಗಿ ಇಲ್ಲಿ ಆ ಆರು ಸಾಮಾನ್ಯ ನಕರಾತ್ಮಕ ಅಭ್ಯಾಸಗಳು ಯಾವುವು?. ಅವು ಯಾವ ರೀತಿ ಪರಿಣಾಮ ಬೀರುತ್ತವೆ?, ಅದರಿಂದ ಹೊರಬರುವುದು ಹೇಗೆಂದು ಮಾಹಿತಿ ಕೊಡಲಾಗಿದೆ ನೋಡಿ…
ದೈಹಿಕ ಚಟುವಟಿಕೆಯ ಕೊರತೆ
ದೈಹಿಕ ಚಟುವಟಿಕೆಯ ಕೊರತೆಯು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಎಲ್ಲಾ ಸಮಯದಲ್ಲೂ ಕುಳಿತುಕೊಳ್ಳುವುದು ಮತ್ತು ನಿಷ್ಕ್ರಿಯವಾಗಿರುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಿಯಮಿತ ವ್ಯಾಯಾಮವು ನಿಮ್ಮ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ. ಜತೆಗೆ ಮನಸ್ಥಿತಿ ಸುಧಾರಿಸಿ, ಒಟ್ಟಾರೆ ಚೈತನ್ಯವನ್ನು ಹೆಚ್ಚಿಸುತ್ತದೆ.
ಮಿತಿ ಮೀರಿದ ಮೊಬೈಲ್, ಕಂಪ್ಯೂಟರ್ ಬಳಕೆ
ಹೆಚ್ಚಿನ ಸಮಯ ನಾವು ಪರದೆಯನ್ನೇ ನೋಡುತ್ತಾ ಕಾಲ ಕಳೆಯುವುದು ಕೂಡ ನಮ್ಮ ಆರೋಗ್ಯ ಕುಗ್ಗಲು ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ದಿನವಿಡೀ ಸ್ಕ್ರೀನ್ ನೋಡುತ್ತಾ ಕೂರುವ ಬದಲು ವಿರಾಮ ತೆಗೆದುಕೊಳ್ಳಿ. ಮೊಬೈಲ್, ಕಂಪ್ಯೂಟರ್, ಟಿವಿ ಸ್ಕ್ರೀನ್ ನೋಢುವ ಬದಲು ಬದಲಿ ಆಯ್ಕೆ ಇದೆಯೇ ಅಂತೊಮ್ಮೆ ಪರಿಶೀಲಿಸಿ.
ನಿದ್ರೆಯ ಕೊರತೆ
ಸರಿಯಾಗಿ ನಿದ್ರೆ ಮಾಡದಿದ್ದರೆ ಅದು ನಮ್ಮ ಶಕ್ತಿಯ ಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ತಡ ರಾತ್ರಿವರೆಗೂ ಎಚ್ಚರವಾಗಿರುವುದು, ಅನಿಯಮಿತ ನಿದ್ರೆ ಅಥವಾ ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದು ನಿದ್ರೆಯ ಚಕ್ರಕ್ಕೆ ತೊಂದರೆಗೊಳಿಸಬಹುದು. ನಿದ್ರೆಯ ಅಭ್ಯಾಸ ಸುಧಾರಿಸಲು ಮಲಗುವ ಸಮಯದ ದಿನಚರಿ ಬದಲಾಯಿಸಿ. ವಿಶ್ರಾಂತಿ ವಾತಾವರಣವಿರಲಿ. ಮಲಗುವ ಸಮಯದಲ್ಲಿ ಕೆಫೀನ್‌ನಂತಹ ಉತ್ತೇಜಕಗಳನ್ನು ಸೇವನೆ ತಪ್ಪಿಸಿ.
ಅನಾರೋಗ್ಯಕರ ಆಹಾರ
ಸಂಸ್ಕರಿಸಿದ ಆಹಾರ, ಅನಾರೋಗ್ಯಕರ ಕೊಬ್ಬಿನ ಆಹಾರ ಸೇವಿಸುವುದರಿಂದ ಆಲಸ್ಯ ಭಾವನೆ ಉಂಟುಮಾಡಬಹುದು. ಈ ಆಹಾರ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಅವು ನಿಮ್ಮ ಮನಸ್ಥಿತಿ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ. ಆದ್ದರಿಂದ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಸೇರಿದಂತೆ ಸಮೃದ್ಧ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಅಲ್ಲದೆ, ದೇಹವನ್ನು ಹೈಡ್ರೇಟೆಡ್ ಆಗಿರಿಸಿ. ಸಕ್ಕರೆ ಪಾನೀಯಗಳು ಮತ್ತು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ.
ನಕಾರಾತ್ಮಕ ಚರ್ಚೆಯಿಂದ ದೂರವಿರಿ
ಬೇರೆಯವರು ನಿರಂತರವಾಗಿ ನಿಮ್ಮನ್ನು ಟೀಕಿಸುವುದು ಅಥವಾ ನಿಮ್ಮ ನ್ಯೂನತೆಗಳ ಮೇಲೆ ಕೇಂದ್ರೀಕರಿಸುವುದು, ನಕಾರಾತ್ಮಕ ಚರ್ಚೆಯು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಬಹುದು. ಆದ್ದರಿಂದ ನಿಮ್ಮ ಬೆಳವಣಿಗೆಗೆ ಸಹಕರಿಸುವ ವ್ಯಕ್ತಿಗಳೊಂದಿಗೆ ನೀವಿರಿ.
ಸಂವಹನದ ಕೊರತೆ
ಒಂಟಿತನ ಎಲ್ಲಾ ಸಮಯದಲ್ಲೂ ಒಳ್ಳೆಯದಲ್ಲ. ಜನರೊಂದಿಗೆ ಸಂವಹನ ನಮ್ಮ ಯೋಗಕ್ಷೇಮಕ್ಕೆ ಅತ್ಯಗತ್ಯ. ಆದ್ದರಿಂದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಾಲ ಕಳೆಯಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಇದು ನಿಮ್ಮ ಒಟ್ಟಾರೆ ಮನಸ್ಥಿತಿ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.