More

    ವ್ಯಾಯಾಮದ ಮೊದಲು ಮತ್ತು ನಂತರ ಯಾವ ರೀತಿಯ ಆಹಾರ ಸೇವನೆ ಮಾಡಿದರೆ ಸೂಕ್ತ?

    ದೇಹಕ್ಕೆ ಪ್ರೋಟೀನ್‌ಯುಕ್ತ ಆಹಾರಗಳು ಅತ್ಯಾವಶ್ಯಕ. ವಿಶೇಷವಾಗಿ ವ್ಯಾಯಾಮ ಮಾಡಿದ ನಂತರ ಮತ್ತು ಮೊದಲು ನಾವು ಯಾವ ರೀತಿಯ ಆಹಾರ ಸೇವನೆ ಮಾಡಿದರೆ ಸೂಕ್ತ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹಾಗಾಗಿ ತಜ್ಱರ ಪ್ರಕಾರ ನಾವು ವ್ಯಾಯಾಮ ಮಾಡುವಾಗ, ನಂತರ ಹಾಗೂ ಮೊದಲು ಯಾವ ರೀತಿಯ ಆಹಾರ ಸೇವಿಸಿದರೆ ಸೂಕ್ತ ಎಂಬುದನ್ನು ವಿವರಿಸಲಾಗಿದೆ.

    ವ್ಯಾಯಾಮದ ನಂತರ…
    ವ್ಯಾಯಾಮ ಮಾಡಿದ 30 ನಿಮಿಷಗಳಲ್ಲಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ದೇಹದ ಸ್ನಾಯು ಆರೋಗ್ಯಕ್ಕೆ ಅಧಿಕ ಪ್ರೋಟೀನ್ ಬೇಕಾಗುತ್ತದೆ. ಆದ್ದರಿಂದ ವ್ಯಾಯಾಮದ ನಂತರ ಮೊಟ್ಟೆ, ಆವಕಾಡೊ (ಬೆಣ್ಣೆ ಹಣ್ಣು), ಮೀನು, ಸಿಹಿ ಗೆಣಸು, ಕೆಂಪಕ್ಕಿ ಅನ್ನ, ಕ್ಯಾರೆಟ್, ಹಣ್ಣುಗಳನ್ನು ಸೇವಿಸಬೇಕು. ಮೊಟ್ಟೆಯ ಬಿಳಿಯ ಭಾಗ ಪ್ರೋಟೀನ್ ಮತ್ತು ಅಮೀನೊ ಆಮ್ಲಗಳನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ. ಇದು ತೀವ್ರ ವ್ಯಾಯಾಮದ ನಂತರ ಹಾನಿಗೊಳಗಾದ ಅಂಗಾಂಶಗಳನ್ನು ಪುನರ್ ನಿರ್ಮಿಸಲು ಸಹಾಯ ಮಾಡುತ್ತದೆ.

    ದಿನವಿಡೀ ಶಕ್ತಿಯುತರಾಗಿರಲು
    ಆವಕಾಡೊ ಸ್ಯಾಚುರೇಟೆಡ್ ಕೊಬ್ಬುಗಳನ್ನು, ಫೋಲಿಕ್ ಆಮ್ಲ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಈ ಮತ್ತು ಪಾಂಟೊಥೆನಿಕ್ ಆಮ್ಲಗಳನ್ನು ಒಳಗೊಂಡಿದ್ದು ದಿನವಿಡೀ ಸಕ್ರಿಯ ಮತ್ತು ಶಕ್ತಿಯುತರಾಗಿರಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಮೀನು ಶೀಘ್ರ ಚೇತರಿಕೆಗೆ ಅಗತ್ಯವಾದ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಹೊಂದಿದೆ. ಸಾಲ್ಮನ್ ಮೀನು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಮತ್ತು ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಲು ಅಥವಾ ಚಾಕಲೇಟ್ ಹಾಲಿನೊಂದಿಗೆ ಕಾರ್ಬೊಹೈಡ್ರೇಟ್ ಸಮೃದ್ಧವಾಗಿರುವ ಏಕದಳ ಧಾನ್ಯಗಳನ್ನು ಒಂದು ಬೌಲ್‌ನಷ್ಟು ಸೇವಿಸಿದರೆ ಸ್ನಾಯುಗಳು ಬಲಗೊಳ್ಳುತ್ತವೆ.

    ಕೆಂಪಕ್ಕಿ ಅನ್ನ
    ವ್ಯಾಯಾಮದ ನಂತರ ದೇಹದ ಗ್ಲೈಕೋಜೆನ್ ಮಟ್ಟ ಕಡಿಮೆಯಾಗುವುದರಿಂದ ಸಿಹಿ ಗೆಣಸು ತಿನ್ನಿ. ಇದರಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್ ಅಧಿಕವಾಗಿ ಇರುವುದರಿಂದ ಗ್ಲೈಕೋಜೆನ್ ಮಟ್ಟ ಹೆಚ್ಚುತ್ತದೆ. ಕೆಂಪಕ್ಕಿ ಅನ್ನ ಕಂದು ಮತ್ತು ಬಿಳಿ ಅಕ್ಕಿಗಿಂತ ಹೆಚ್ಚು ಆರೋಗ್ಯಕರವಾಗಿರುತ್ತದೆ. ಡ್ರೈ ಫ್ರೂಟ್ಸ್ಗಳಲ್ಲಿ ವಿಟಮಿನ್ ಎ, ವಿಟಮಿನ್ ಕೆ, ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದರೆ ದೇಹದಲ್ಲಿ ಶಕ್ತಿ ಮತ್ತು ಗ್ಲೈಕೋಜಿನ್ ಮಟ್ಟ ಹೆಚ್ಚುತ್ತದೆ. ಕ್ಯಾರೆಟ್‌ನಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ, ವಿಟಮಿನ್ ಎ ಹೇರಳವಾಗಿರುವುದರಿಂದ ವ್ಯಾಯಾಮದ ನಂತರ ಸೇವಿಸಿದರೆ ಒಳ್ಳೆಯದು. ಹಣ್ಣುಗಳಲ್ಲಿ ಫೈಬರ್, ನೀರು, ವಿಟಮಿನ್ ಸಿ ಹಾಗೂ ಕಾರ್ಬೊಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದೇಹಕ್ಕೆ ಪೋಷಕಾಂಶಗಳನ್ನು ಮರಳಿ ನೀಡಲು ಮತ್ತು ದಣಿದ ಸ್ನಾಯುಗಳನ್ನು ಶಕ್ತಿಯುತಗೊಳಿಸಲು ಸಹಾಯ ಮಾಡುತ್ತದೆ.

    ನೆನಪಿಡಿ…
    *ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ವ್ಯಾಯಾಮಕ್ಕೆ ಮೊದಲು ಆಹಾರ ಸೇವಿಸುವವರು ಡ್ರೈಫ್ರೂಟ್ಸ್, ತಾಜಾಹಣ್ಣಿನ ರಸಗಳನ್ನು ಸೇವಿಸಿ.
    *ಲಘು ವ್ಯಾಯಾಮ, ಯೋಗ ಮಾಡುವವರು ಒಂದು ಲೋಟ ನೀರು ಮತ್ತು ಬಾಳೆಹಣ್ಣು ತಿನ್ನಿರಿ.
    *ದಪ್ಪಗಾಗಬೇಕು ಎನ್ನುವವರು ಪ್ರೋಟಿನ್‌ಯುಕ್ತ ಆಹಾರ, ತೆಳ್ಳಗಾಗಲು ತೂಕ ಇಳಿಸುವ ವ್ಯಾಯಾಮ ಮಾಡುವವರು ಒಣಬೀಜಗಳು, ತರಕಾರಿಗಳು, ಸ್ಯಾಂಡ್‌ವಿಚ್ ತಿನ್ನಬಹುದು.
    *ವ್ಯಾಯಾಮ ಮಾಡುವಾಗ ದೇಹದಿಂದ ಸಾಕಷ್ಟು ನೀರು ಬೆವರಿನ ರೂಪದಲ್ಲಿ ವ್ಯಯವಾಗುವುದರಿಂದ ದಣಿವಾದಾಗಲೆಲ್ಲಾ ನೀರಿನ ಸೇವನೆ ಮಾಡಿ.

    ಕರಿಬೇವಿನ ಎಲೆಗಳು ಒಗ್ಗರಣೆಗೆ ಮಾತ್ರವಲ್ಲ, ಈ ರೀತಿಯಾಗಿಯೂ ಬಳಸಬಹುದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts