ಕಂಪ್ಲಿ: ಲೋಕಸಭೆ ಚುನಾವಣೆ ನಡೆಯುವ ಮೇ 7ರಂದು ಪ್ರತಿಯೊಬ್ಬರೂ ತಪ್ಪದೆ ಹಕ್ಕು ಚಲಾಯಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಗಿರಿಜಾಶಂಕರ್ ಹೇಳಿದರು.
ತಾಲೂಕಿನ ಸುಗ್ಗೇನಹಳ್ಳಿ, ಮೆಟ್ರಿ ಗ್ರಾಪಂ ವ್ಯಾಪ್ತಿಯ ಮದಲಿಂಗ ಕೆರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಶನಿವಾರ ಮತದಾನದ ಮಹತ್ವ ಕುರಿತು ಮಾತನಾಡಿದರು. ಚುನಾವಣೆ ಹಬ್ಬವಿದ್ದಂತೆ. ಚುನಾವಣೆ ಪರ್ವ ದೇಶದ ಗರ್ವವಾಗಿದೆ. ಪ್ರತಿಯೊಬ್ಬರೂ ವಿವೇಚನೆಯಿಂದ ಮತಚಲಾಯಿಸಬೇಕು. ಎಲ್ಲರ ಮತಕ್ಕೂ ಮೌಲ್ಯವಿದ್ದು, ಪಾಲ್ಗೊಳ್ಳಬೇಕು ಎಂದರು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿನೋದ್, ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಪಿಡಿಒಗಳಾದ ಕೆ.ಹನುಮಂತಪ್ಪ, ಶ್ರೀಶೈಲಗೌಡ, ಟಿ.ಸಿ. ಸಂಗಮೇಶ, ಟಿಐಇಸಿ ಹನುಮೇಶ್ ಹಾಗಲೂರು ಹೊಸಳ್ಳಿ ಇತರರಿದ್ದರು.