ನ್ಯೂಸ್

ಕಾಲುವೆಗೆ ಉರುಳಿದ Cruiser, ಆರು ಮಂದಿ ಸಾವು; ಮದುವೆ ಮುಗಿಸಿ ಬರುತ್ತಿದ್ದವರು ಸೇರಿದ್ದು ಮಸಣಕ್ಕೆ

ಚಂಡೀಗಢ: 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ (Cruiser)​ ವಾಹನವೊಂದು ಕಾಲುವೆಗೆ ಉರುಳಿದ ಪರಿಣಾಮ ಆರು ಮಂದಿ ಮೃತಪಟ್ಟು, ಆರು ಮಂದಿ ನಾಪತ್ತೆಯಾಗಿರುವ ಘಟನೆ ಹರಿಯಾಣದ ಫತೇಹಾಬಾದ್​ನಲ್ಲಿ ನಡೆದಿದೆ. 

ಘಟನೆ ಕುರಿತಾಗಿ ಮಾತನಾಡಿರುವ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜಗದೀಶ್ ಚಂದ್ರ, ಪಂಜಾಬ್‌ನ ಫಜಿಲ್ಕಾದಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು 14ಮಂದಿ ಕ್ರೂಸರ್ ವಾಹನದಲ್ಲಿ ವಾಪಸ್​ ಆಗುತ್ತಿದ್ದರು. ಫತೇಹಾಬಾದ್​ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನವು ಕಾಲುವೆಗೆ ಉರುಳಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. 

ವಾಹನ ಕಾಲುವೆಗೆ ಉರುಳಿದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಆರು ಮಂದಿಯನ್ನು ರಕ್ಷಿಸಿದ್ದಾರೆ. ಇನ್ನಿಬ್ಬರು ಕಾಣೆಯಾಗಿದ್ದ, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತರ ಪೈಕಿ 15 ತಿಂಗಳ ಮಗು, 10 ವರ್ಷದ ಬಾಲಕಿ ಕೂಡ ಇದ್ದಾರೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜಗದೀಶ್ ಚಂದ್ರ ತಿಳಿಸಿದ್ದಾರೆ.