ನ್ಯೂಸ್

ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು..ತಿಂದು 9ನೇ ತರಗತಿ ಬಾಲಕ ಸಾವು..Surgery

 ನವದೆಹಲಿ:   ( Surgery ) ಇಲ್ಲೊಬ್ಬ ಬಾಲಕನಿಗೆ   ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ತಿನ್ನುವ ಅಭ್ಯಾಸ. ಹೀಗೆ ತಿನ್ನುತ್ತಾ ಸುಮಾರು 56 ವಸ್ತುಗಳು ಆತನ ಹೊಟ್ಟೆ ಸೇರಿವೆ. ಆದರೆ ಅಪಾಯದಲ್ಲಿದ್ದ ಬಾಲಕನ ಜೀವ ಉಳಿಸುವ ವೇಳೆ ಆತ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

 ಬಾಲಕ ಆದಿತ್ಯ(15 ) ಮೃತ. 9ನೇ ತರಗತಿಯಲ್ಲಿ ಓದುತ್ತಿದ್ದನು. ಸರಿಯಾಗಿ ಆಹಾರ ತಿನ್ನುವ ಕಾಲದಲ್ಲಿ ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ತಿನ್ನುತ್ತಿದ್ದನು. ಹೀಗೆ ತಿನ್ನುತ್ತಾ ಸುಮಾರು 56 ವಸ್ತುಗಳನ್ನು ತಿಂದಿದ್ದಾನೆ.

ಹೀಗೆ ಹೊಟ್ಟೆ ಸೇರಿದ ಬಳಿಕ ಬಾಲಕನಿಗೆ ಹೊಟ್ಟೆ ನೋವು, ಉಸಿರಾಟದ ಸಮಸ್ಯೆ ಕಾಡಲಾರಂಭಿಸಿದೆ. ಬಳಿಕ ಜೀವಕ್ಕೆ ಅಪಾಯ ಎದುರಾಗಿದೆ. ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ತಿಂದ ಬಾಲಕ ಸಫ್ದರ್​​ಜಂಗ್​ ಆಸ್ಪತ್ರೆ ಸೇರಿದ್ದಾನೆ.

ವೈದ್ಯರು ಆತನ ಜೀವ ಉಳಿಸಲು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಕೊನೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯೂ ಆಗಿದೆ. ಆದರೆ ಮಾರನೇ ದಿನ ಬಾಲಕ ಸಾವನ್ನಪ್ಪಿದ್ದಾನೆ.