ಲುಬ್ಲಿಯಾನಾ: ಪ್ರಾಚೀನ ಕಾಲದ ಅನೇಕ ಸಂಗೀತ ಸಾಧನಗಳ ಬಗ್ಗೆ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ, 1995ರಲ್ಲಿ ಪತ್ತೆಯಾದ ಕೊಳಲನ್ನು ಜಗತ್ತಿನಲ್ಲೇ ಅತ್ಯಂತ ಹಳೆಯ ಸಂಗೀತ ಸಾಧನವೆಂದು ಪರಿಗಣಿಸಲಾಗಿದೆ. ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿರುವ ಈ ಸಂಗೀತ ಸಾಧನವು 50 ಸಾವಿರ ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗಿದೆ.
ಸ್ಲೊವೇನಿಯಾದ ದಿವ್ಜೆ ಬೇಬ್ ಗುಹೆಯಲ್ಲಿ ಪತ್ತೆಯಾದ ಕೊಳಲನ್ನು ದಿವ್ಜೆ ಬೇಬ್ ಕೊಳಲು ಹಾಗೂ ನಿಯಾಂಡರ್ತಲ್ ಕೊಳಲೆಂದು ಕರೆಯಲಾಗುತ್ತದೆ. 1995ರಲ್ಲಿ ಇವಾನ್ ಟರ್ಕ್ ಹೆಸರಿನ ಪುರಾತತ್ವಶಾಸ್ತ್ರಜ್ಞರು ಇದ್ರಿಕಾ ನದಿ ಪಕ್ಕದಲ್ಲಿ ಉತ್ಖನನ ಮಾಡುವಾಗ ಮೂಳೆಗಳಿಂದ ಮಾಡಿದ ಮತ್ತು ನಿಯಾಂಡರ್ತಲ್ ಜನಾಂಗ ಬಳಸುತ್ತಿದ್ದ ಕೊಳಲನ್ನು ಪತ್ತೆಹಚ್ಚಲಾಯಿತು. ಇಂದಿಗೂ ಈ ಕೊಳಲು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಶೇಷವಾದ ಕೊಳಲನ್ನು ಸ್ಲೋವೆನಿಯಾದ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
ಇದು ವಿಶ್ವದ ಅತ್ಯಂತ ಹಳೆಯ ಕೊಳಲಾಗಿದ್ದು, ಮೂರು ಪಂಕ್ಚರ್ ರಂಧ್ರಗಳನ್ನು ಸರಿಪಡಿಸಲಾಗಿದೆ. ನಿಯಾಂಡರ್ತಲ್ಗಳು ಮೊದಲು ಸಂಗೀತ ವಾದ್ಯಗಳನ್ನು ತಯಾರಿಸಿದರು ಎಂದು ಹೇಳಲಾಗಿದೆ. ಈ ಜನಾಂಗದವೇ ಸಂಗೀತವನ್ನು ಮೊದಲು ರಚಿಸಿದ್ದಾರೆ ಎಂಬುದಕ್ಕೆ ಈ ಕೊಳಲು ಆಧಾರವಾಗಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)