ನ್ಯೂಸ್

ಕಾರ್ಟೂನ್​ ನೋಡುತ್ತಿದ್ದಾಗ ಹೃದಯಾಘಾತ: 5 ವರ್ಷದ ಮಗು ಮೃತ್ಯು

ಲಕ್ನೋ: ಕಳೆದ ಮೂರ್ನಾಲ್ಕು ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಿದೆ. ಸೆಲೆಬ್ರಿಟಿಗಳು, ಸಿನಿಮಾ ನಟರು, ವೈದ್ಯರು ಕೂಡ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಹೃದಯಾಘಾತ ಈಗ ಸಣ್ಣ ಮಕ್ಕಳನ್ನೂ ಬಿಟ್ಟಿಲ್ಲ.

ಉತ್ತರ ಪ್ರದೇಶ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯ ಹತೈಖೇಡಾದಲ್ಲಿ ಭಾನುವಾರ ಮೊಬೈಲ್ ಫೋನ್‌ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದ ಐದು ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.

ಘಟನೆ ವಿವರ: ಕಾಮಿನಿ ಎಂಬ ಮಗು ತನ್ನ ತಾಯಿಯ ಪಕ್ಕದಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಗ ಫೋನ್ ಇದ್ದಕ್ಕಿದ್ದಂತೆ ಅವಳ ಕೈಯಿಂದ ಬಿದ್ದು ಪ್ರಜ್ಞಾಹೀನಳಾದಳು. ತಕ್ಷಣವೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಮಗು ಮೃತಪಟ್ಟಿರುವುದಾಗಿ ಎಂದು ಹೇಳಿದರು.

ಶವವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸುವಂತೆ ನಾವು ಕುಟುಂಬಕ್ಕೆ ಮನವಿ ಮಾಡಿದ್ದೇವೆ. ಆದರೆ ಅವರು ಒಪ್ಪಲಿಲ್ಲ. ಮಗು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಯೇ ಆಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ತನಿಖೆಯ ವಿಷಯವಾಗಿದೆ ಎಂದು ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್​ ಸಿಂಗ್​ ಹೇಳಿದ್ದಾರೆ.

ಅಮ್ರೋಹಾ ಜಿಲ್ಲೆಯಲ್ಲಿ ಇಂತಹ ಘಟನೆ ಇದೇ ಮೊದಲಲ್ಲ: ಕಳೆದ ಎರಡು ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆ ಅಮ್ರೋಹಾ ಮತ್ತು ಬಿಜ್ನೋರ್ ಜಿಲ್ಲೆಗಳಲ್ಲಿ "ಹೃದಯಾಘಾತ" ದಿಂದ ಹನ್ನೆರಡು ಮಕ್ಕಳು ಮತ್ತು ಯುವಕರು ಇದೇ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

16 ವರ್ಷದ ಪ್ರಿನ್ಸ್ ಕುಮಾರ್ ಅವರು ಡಿ.31, 2023 ರಂದು ಅಮ್ರೋಹಾದ ಹಸನ್‌ಪುರ್ ಪ್ರದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಮೂರ್ಛೆ ಹೋಗಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತು. ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದರು.