ನ್ಯೂಸ್

ನಿಯಂತ್ರಣ ತಪ್ಪಿ Goods Vehicle ಪಲ್ಟಿ; ಐದು ಮಂದಿ ಸಾವು, 80ಕ್ಕೂ ಅಧಿಕ ಮಂದಿಗೆ ಗಾಯ

ರಾಯ್​ಪುರ: ಗೂಡ್ಸ್​​ ವಾಹನವೊಂದು (Goods Vehicle) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಬಸ್ತಾರ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಎಎಸ್​ಪಿ ಮಹೇಶ್ವರ್​ ನಾಗ್​ ಮಾತನಾಡಿ, 45 ಜನರನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್​ ವಾಹನವೊಂದುದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಮೇಟಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಿಆರ್​ಪಿಎಫ್​ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಎಎಸ್​ಪಿ ಮಹೇಶ್ವರ್​ ನಾಗ್​  ತಿಳಿಸಿದ್ದಾರೆ.

ವೈದ್ಯಾಧಿಕಾರಿ ದಿಲೀಪ್​ ಕಶ್ಯಪ್​ ಮಾತನಾಡಿ, 30ಕ್ಕೂ ಅಧಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 4 ಜನರು ಸ್ಥಳದಲ್ಲೇ ಮೃತಪಟ್ಟರೆ ಓಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪಘಾತದಲ್ಲಿ 81 ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ದಿಲೀಪ್​ ಕಶ್ಯಪ್ ಮಾಹಿತಿ ನೀಡಿದ್ದಾರೆ.