ನ್ಯೂಸ್

ಕರುಳಿನ ಆರೋಗ್ಯಕ್ಕೆ ಅನುಕೂಲಕರವಾದ 5 ಆಹಾರಗಳು ನಿಮಗಾಗಿ! Health

Health: ನಾವು ಪ್ರತಿನಿತ್ಯ ಸೇವಿಸುವ ಆಹಾರದ ಕುರಿತಾಗಿ ಹೆಚ್ಚಿನ ಜಾಗೃತೆ ವಹಿಸಿರುತ್ತೇವೆ. ಹೊಟ್ಟೆ ಸ್ವಲ್ಪ ತೊಂದರೆಗೊಳಗಾದ ತಕ್ಷಣ ನಮಗೆ ಮೊದಲು ನೆನಪು ಆಗುವ ಖಾದ್ಯಗಳಲ್ಲಿ ಮೊಸರು ಅನ್ನವೂ ಒಂದು. ಇದು ಆರೋಗ್ಯಕರ ಹಾಗೂ ಅತ್ಯಂತ ರುಚಿಕರವಾಗಿರುತ್ತದೆ. ಆದರೆ ನಾವು ಇಂದು ಮೊಸರು ಇಲ್ಲದೆ, ನಿಮ್ಮ ಆರೋಗ್ಯ ಸುಧಾರಿಸುವ ಆಹಾರಗಳನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

1. ಹೆಸರು ಬೇಳೆ ಕಿಚಡಿ

ಹೊಟ್ಟೆ ಏನಾದರೂ ಸಮಸ್ಯೆ ಹೊಂದಿದಾಗ ಇದು ಅತ್ಯುತ್ತಮವಾದ ಆರಾಮದಾಯಕ ಆಹಾರವಾಗಿದೆ. ಹೆಸರು ಬೇಳೆ ಹೆಚ್ಚು ಪ್ರೊಟೀನ್​ ಅಂಶ ಹೊಂದಿರುವಂತಹ ಆಹಾರ ಖಾದ್ಯವಾಗಿದ್ದು, ಇದನ್ನು ಬೇಗನೆ ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ಈ ಆಹಾರವನ್ನು ತಯಾರಿಸಿ, ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಬಹಳ ಬೇಗವಾಗುತ್ತದೆ.

2.ಧೋಕ್ಲಾ

ಕಡಲೆ ಹಿಟ್ಟಿನಿಂದ ತಯಾರಿಸಿದ ಸಿಹಿಯಾಗಿದ್ದು, ಇದನ್ನು ಆವಿಯಲ್ಲಿ ಬೇಯಿಸಿದಂತಹ ಖಾದ್ಯವಾಗಿರುತ್ತದೆ. ಇದರ ಜೊತೆಗೆ ಕೊತ್ತುಂಬರಿ, ಪುದೀನ ಚಟ್ನಿಯು ದೇಹವನ್ನು ತಂಪಾಗಿರಿಸಲು ಸಹಾಯಮಾಡುತ್ತದೆ. ಈ ಖಾದ್ಯವನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು.

3. ಪಾಲಕ್ ಹೆಸರು ಬೇಳೆ ದಾಲ್​

ಪಾಲಕ್​ ಹಾಗೂ ಹೆಸರುಬೇಳೆಯಲ್ಲಿ ಫೈಬರ್​ ಅಂಶವಿರುವುದರಿಂದ ಕರುಳಿಗೆ ಶಮನ ನೀಡುವ ಪ್ರೊಟೀನ್​ ಆಗಿದೆ. ಇದು ಚರ್ಮಕ್ಕೆ ಮಾತ್ರವಲ್ಲದೆ ದೇಹದ ಆರೋಗ್ಯಕ್ಕೂ ಒಳ್ಳೆಯದು. ಬೆಳ್ಳುಳ್ಳಿ ಮತ್ತು ಜೀರಿಗೆಯನ್ನು ಬೆರೆಸುವ ಮೂಲಕ ನೀವು ಅದರ ರುಚಿಯನ್ನು ಸುಲಭವಾಗಿ ಹೆಚ್ಚಿಸಬಹುದು. ಅದು ನಿಮ್ಮ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.

4. ಕಡಲೆಕಾಯಿ ಪೋಹಾ

ಕಡಲೆಕಾಯಿ ಪೋಹ ತಿನ್ನುವುದರಿಂದ ಜೀರ್ಣಕ್ರಿಯೆ ಬಹಳ ಸುಲಭವಾಗಿ ಆಗುತ್ತದೆ. ಇದೊಂದು ಕುರುಕಲು ತಿಂಡಿಯಾಗಿದ್ದು, ಇದಕ್ಕೆ ಒಂದು ಹಿಡಿ ಕಡಲೆಕಾಳು, ರುಚಿಗೆ ಕರಿಬೇವು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಬೇಕು. ಇದರಲ್ಲಿ ಎಣ್ಣೆ ಕಡಿಮೆ ಇರುವುದರಿಂದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

5. ಬೀಟ್‌ರೂಟ್ ಸಬ್ಜಿ

ಬೀಟ್‌ರೂಟ್​ನಲ್ಲಿ ಹೆಚ್ಚಿನ ಫೈಬರ್​ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಬೀಟ್​ರೂಟ್​ ಜೊತೆ ತೆಂಗಿನಕಾಯಿ, ಸಾಸಿವೆ ಮತ್ತು ಕರಿಬೇವಿನ ಎಲೆಗಳೊಂದಿಗೆ ಬೇಯಿಸಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. (ಏಜೆನ್ಸೀಸ್​)