ನ್ಯೂಸ್

ಟ್ರಕ್​, ಟೆಂಪೋ ನಡುವೆ ಭೀಕರ ಅಪಘಾತ; 5 ಜನ ಮೃತ್ಯು, 10 ಮಂದಿಗೆ ಸ್ಥಿತಿ ಗಂಭೀರ!

ಉತ್ತರಪ್ರದೇಶ: ಟ್ರಕ್‌ವೊಂದು ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ 5 ಜನ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ.

ಮೃತರನ್ನು ಭಗವಾನ್ ಪ್ರಸಾದ್ (40), ಅನಿಲ್ (15), ಖುಷ್ಭು (35), ಹರೀಶ್ (45) ಮತ್ತು ಜೈ ಕರಣ್ (40) ಎಂದು ಗುರುತಿಸಲಾಗಿದೆ. ಅವರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅಹಿರಾನ್‌ಪುರಕ್ಕೆ ಟೆಂಪೋದಲ್ಲಿ ಹಿಂತಿರುಗುತ್ತಿದ್ದಾಗ ರಾಂಗ್‌ ಸೈಡ್‌ನಿಂದ ಬಂದ ಟ್ರಕ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಟೆಂಪೋನಲ್ಲಿದ್ದವರಿಗೆ ಸಾವು ನೋವು ಸಂಭವಿಸಿದೆ.

ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತಾಗಿ ತನಿಖೆ ನಡೆಸುತ್ತೇವೆಂದು ಪೊಲೀಸ್​ ಆಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.