ಪುಣೆ: 48 ವರ್ಷದ ಮಹಿಳೆಯೊಬ್ಬಳು ಜಾಬ್ ಆಫರ್ ಲಿಂಕ್ ಕ್ಲಿಕ್ ಮಾಡಿ 5 ಲಕ್ಷ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇದನ್ನೂ ಓದಿ: ಪತ್ನಿ ಹತ್ಯೆಗೈದು ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದ ಪತಿ..
ಮಹಿಳೆಯನ್ನು ಪ್ರಜಾ ನಂದನ್ ಕುಲಕರ್ಣಿ ಎಂದು ಗುರುತಿಸಲಾಗಿದ್ದು, ಸಿಂಹಗಡ ರಸ್ತೆಯ ಧಯಾರಿ ಫಾಟಾದಲ್ಲಿ ವಾಸವಾಗಿದ್ದು ಜೀವನೋಪಾಯಕ್ಕಾಗಿ ಮನೆಯಲ್ಲಿಯೇ ಕುಳಿತು ಬೋಧಕರಾಗಿ ಕೆಲಸ ಮಾಡುತ್ತಾಳೆ. ಆಕೆ ಹೆಚ್ಚುವರಿ ಆದಾಯದ ಹುಡುಕಾಟದಲ್ಲಿ, ಆನ್‌ಲೈನ್ ವೆಬ್‌ಸೈಟ್‌ಗಳ ಮೂಲಕ ಕೆಲಸವನ್ನು ಹುಡುಕಲು ಪ್ರಾರಂಭಿಸಿದ್ದಳು.
ಈ ವೇಳೆ ಆಕೆಗೆ ಮನೆಯಲ್ಲಿಯೇ ಕುಳಿತು ಸಂದೇಶವೊಂದು ಬಂದಿದ್ದು, ಆಕೆ ಕೂಡಲೇ ಅದನ್ನು ತೆಗೆದಿದ್ದು ಅಲ್ಲಿ ಲಿಂಕ್ವೊಂದನ್ನು ನೀಡಲಾಗಿತ್ತು, ಈ ವೇಳೆ ಆಕೆ ಕೆಲವು ಕೆಲಸದ ಸೂಚನೆಗಳನ್ನು ನೀಡಿ ಅದನ್ನು ನಿರ್ಧಿಷ್ಟ ಕೆಲಸವನ್ನು ಮಾಡಿ ಮುಗಿಸಿದರೆ, ಹಣ ನೀಡುವುದಾಗಿ ಹೇಳಲಾಗಿತ್ತು. ಆಗ ಆಕೆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದು, ಆಕೆಗೆ ಟೆಲಿಗ್ರಾಮ್ ಗುಂಪಿಗೆ ಸೇರಲು ಸೂಚಿಸಲಾಗಿತ್ತು.
ಇದನ್ನೂ ಓದಿ: ಸೀನನ್ನು ಬಲವಂತವಾಗಿ ತಡೆ ಹಿಡಿದ ವ್ಯಕ್ತಿ: ಮುಂದೆ ನಡೆದದ್ದು ಮಾತ್ರ ಜೀವನ ಪೂರ್ತಿ ಮರೆಯೊಲ್ಲ ಈತ..
ಬಳಿಕ ಆರಂಭದಲ್ಲಿ ಸ್ಕ್ಯಾಮರ್ಸ್ ಆಕೆಗೆ ಲಿಂಕ್ ಕಳಿಸಿ ಅದನ್ನು ಲೈಕ್ ಮಾಡುವಂತೆ ಹೇಳಿದ್ದರು. ಅಲ್ಲದೇ, ಪ್ರತಿ ಲೈಕ್ಗೆ ಆಕೆಗೆ ಹಣ ಸಿಗುವುದಾಗಿ, ಹೀಗೆ ಹಣವನ್ನು ಪಡೆಯಲು 1000ರೂ. ಕಟ್ಟಬೇಕೆಂದು ಹೇಳಿದ್ದಾರೆ. ಮೊದಮೊದಲು ಆಕೆ ನಿರಾಕರಿಸಿದ್ದಾಳೆ. ಆದರೆ ಕೊನೆಗೆ 1,000 ರೂ. ಕಟ್ಟಿ, ಲೈಕ್ ಮಾಡಿದ್ದಾಳೆ. ಹೀಗೆ ಮಾಡಿದ ಕೂಡಲೇ ಆಕೆಗೆ 1400 ರೂ ನೀಡಲಾಗಿದ್ದು, ಆಕೆಯ ನಂಬಿಕೆ ಬರುವಂತೆ ಮಾಡಿದ್ದಾರೆ.
ಹೀಗೆ ಹಂತಹಂತವಾಗಿ ಆಕೆಗೆ ನಕಲಿ ವೆಬ್ಸೈಟ್ನ ವ್ಯವಸ್ಥೆಯಲ್ಲಿ ನಂಬಿಕೆ ಹೆಚ್ಚಾಗುವಂತೆ ಮಾಡಲಾಗಿದ್ದು, ಕೊನೆಗೆ ಆಕೆ 5 ಲಕ್ಷ ರೂ.ವರೆಗೆ ಪಾವತಿಸಿದ್ದು, ದುರದೃಷ್ಟವಶಾತ್, ಆಕೆ ಯಾವುದೇ ಹೆಚ್ಚಿನ ಪಾವತಿ ಅಥವಾ ತನ್ನ ಮೂಲ ಹಣವನ್ನು ವಾಪಸ್ಸು ಪಡೆರಲಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದನ್ನು ಅರಿತ ಆಕೆ ದೂರು ನೀಡಿದ್ದು, ಪೊಲೀಸರು ವಂಚಕರ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.(ಏಜೆನ್ಸೀಸ್)