ನ್ಯೂಸ್

18ರ ಅಳಿಯನ ಜೊತೆ 40ರ ಅತ್ತೆಯ ಲವ್ವಿಡವ್ವಿ: ಮಗಳನ್ನೇ ಕೊಲ್ಲಲು ಮುಂದಾದ ಅಂಟಿ | illicit relationship

illicit relationship: ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಹಳ್ಳಿಯೊಂದರಲ್ಲಿ 18 ವಯಸ್ಸಿನ ಅಳಿಯ ಜೊತೆ 40 ವಯಸ್ಸಿನ ಅತ್ತೆ ಲವ್ವಿ ಡವ್ವಿ ನಡೆಸಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಹೆತ್ತ ತಾಯಿಯೇ ತನ್ನ ಸ್ವಂತ ಮಗಳನ್ನೇ ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ.

ತಿರುಪತಿ ಜಿಲ್ಲೆಯ ಕೆವಿಬಿಪುರಂ ಮಂಡಲದ ಹಳ್ಳಿಯ 18 ​​ವರ್ಷದ ಯುವಕನೊಬ್ಬ ಐದು ತಿಂಗಳ ಹಿಂದೆ 15 ವರ್ಷದ ಹುಡುಗಿಯನ್ನು ಮದುವೆಯಾಗಿದ್ದ. ಹುಡುಗಿಯ ತಂದೆ ನಿಧನರಾಗಿದ್ದರು.  ಆಕೆಯ 40 ವರ್ಷದ ತಾಯಿ ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.

ಈ ವೇಳೆ 40 ವರ್ಷದ ಅತ್ತೆ 18 ವರ್ಷದ ಅಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಇದನ್ನು ಮುಂದುವರೆಸಲು ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ತನ್ನ ಮಗಳ ಮುಂದೆಯೇ ಅಳಿಯನಿಂದ ತಾಳಿ ಕಟ್ಟಿಸಿಕೊಳ್ಳಲು ಆ ಮಹಿಳೆ ಸಿದ್ದಳಾಗಿದ್ದಾಳೆ.

ಆದರೆ ಹುಡುಗಿ ತನ್ನ ಗಂಡ ಮತ್ತು ತಾಯಿಯ ವಿವಾಹಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ತಾಯಿಯೊಂದಿಗೆ ಜಗಳವಾಡಿದ್ದಾಳೆ. ಇದಿರಿಂದ ತಾಯಿಯೇ ಮಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಆದರೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಹುಡುಕಿ ಕಿರುಚಾಡಿದ್ದರಿಂದ ಸುತ್ತಮುತ್ತಲಿನ ಜನ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳೀಯರು ಅತ್ತೆ ಮತ್ತು ಅಳಿಯನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)