ನಾವು ಗಾಜಾ ನಗರದ ಶೇ.40ರಷ್ಟು ಭೂ ಭಾಗವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಈಗಾಲೇ ಈ ಭಾಗ ಬಹುತೇಕ ನಮ್ಮ ವಶದಲ್ಲಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಬ್ರಿಗೇಡಿಯನ್ ಜನರಲ್ ಎಫೀ ಡೆಫ್ರಿನ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ದಾಳಿಯನ್ನು ಮತ್ತಷ್ಟು ವಿಸ್ತರಣೆಗೊಳಿಸಲಿದ್ದು, ತೀವ್ರಗೊಳಿಸಲಿದನ್ನು ಮುಂದುವರೆಸಲಿದ್ದೇವೆ ಎಂದು ಜನರಲ್ ಎಫೀ ದೂರದರ್ಶನದ ಬ್ರಿಫೀಂಗ್ನಲ್ಲಿ ತಿಳಿಸಿದ್ದಾರೆ ಎಂದು ಶುಕ್ರವಾರ ವರಿದಿಯಾಗಿದೆ.
ಗುರುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಜಾ ಪಟ್ಟಿಯಾದ್ಯಂತ ಕನಿಷ್ಠ 64 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು, ಈ ಮೃತರಲ್ಲಿ ನಗರದಲ್ಲಿಯೇ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಹೊರ ಬಿದ್ದಿದೆ.
2023 ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲಿನ ದಾಳಿಯು ಯುದ್ಧಕ್ಕೆ ನಾಂದಿ ಹಾಡಿದ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಹಮಾಸ್ ಮೇಲೆ "ಅದನ್ನು ಸೋಲಿಸುವವರೆಗೆ" ದಾಳಿ ಮುಂದುವೆರೆಸುವ ಬಗ್ಗೆ ಡೆಫ್ರಿನ್ ಪ್ರತಿಜ್ಞೆ ಮಾಡಿದ್ದರು.
ಇಸ್ರೇಲಿ ಅಂಕಿಅಂಶಗಳನ್ನು ಆಧರಿಸಿದ AFP ಲೆಕ್ಕಾಚಾರದ ಪ್ರಕಾರ, ಹಮಾಸ್‌ನ 2023ರ ಅಕ್ಟೋಬರ್ ಕಾರ್ಯಾಚರಣೆಯಲ್ಲಿ 1,219 ಜನರು ಮೃತಪಟ್ಟಿದ್ದಾರೆ.
ಇಸ್ರೇಲ್‌ನ ಪ್ರತೀಕಾರದ ದಾಳಿಯಲ್ಲಿ ಕನಿಷ್ಠ 64,231 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯು ವಿಶ್ವಾಸಾರ್ಹವೆಂದು ಪರಿಗಣಿಸುವ ಹಮಾಸ್ ಆಡಳಿತದ ಗಾಜಾದಲ್ಲಿನ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)