ಉತ್ತರ ಪ್ರದೇಶ: ಮಂಗಳವಾರ (ಜೂ.03) ಒಂದೇ ಕುಟುಂಬದ ನಾಲ್ವರು ಅಪ್ರಾಪ್ತ ವಯಸ್ಕ ಹುಡುಗಿಯರು ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ.
ಹರಿಯುವ ನದಿಯಲ್ಲಿ ಮೋಜು ಮಸ್ತಿ ಮಾಡುವ ಉತ್ಸಾಹದಲ್ಲಿ ನೀರಿಗೆ ಇಳಿಯುವ ಮುನ್ನ ರೀಲ್ ಮಾಡಿಕೊಂಡಿದ್ದ ಹುಡುಗಿಯರು, ನೀರಿನ ಆಳ ಅರಿಯದೆ ಕಾಲಿಟ್ಟ ಹಿನ್ನೆಲೆ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಮುಳುಗಿದ್ದಾರೆ. ಒಂದೇ ಕುಟುಂಬದ ಆರು ಜನರ ಪೈಕಿ ನಾಲ್ವರು ದುರ್ಮರಣ ಹೊಂದಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
ಸಹಾಯಕ್ಕಾಗಿ ಹುಡುಗಿಯರು ಚೀರಾಡುತ್ತಿದ್ದ ವೇಳೆ ನದಿಯ ದಡದಲ್ಲಿ ನಿಂತಿದ್ದ ಕೆಲವರು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಮೃತ ನಾಲ್ವರು ನಾಗ್ಲಾ ಸ್ವಾಮಿ ಗ್ರಾಮದ ನಿವಾಸಿಗಳು ಮತ್ತು ಇಬ್ಬರು ಆಗ್ರಾದ ರಾಮಿ ನಾಗ್ಲಾದಿಂದ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದರು ಎನ್ನಲಾಗಿದೆ. ನಾಲ್ವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,(ಏಜೆನ್ಸೀಸ್).