ನ್ಯೂಸ್

ರೈಲ್ವೇ ಮೇಲ್ಸೆತುವೆಗೆ ತೋಡಿದ್ದ ಗುಂಡಿಗೆ ಬಿದ್ದು 4 ಬಾಲಕರ ಸಾವು! | Railway Flyover

Railway Flyover: ರೈಲ್ವೇ ಮೇಲ್ಸೆತುವೆ ನಿರ್ಮಾಣ ಯೋಜನೆಗಾಗಿ ಅಗೆದಿದ್ದ ದೊಡ್ಡ ನೀರಿನ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ದರ್ವಾ ಪಟ್ಟಣದಲ್ಲಿ ನಡೆದಿದೆ.

ರೆಹಾನ್​ ಅಸ್ಲಾಂ ಖಾನ್​ (13), ಗೋಲು ಪಾಂಡುರಂಗ್ ನರ್ನವಾರೆ (10), ಸೌಮ್ಯ ಸತೀಶ್ ಖಾಡ್ಸನ್ (10) ಮತ್ತು ವೈಭವ್ ಆಶಿಶ್ ಬೋಧ್ಲೆ (14) ಮೃತ ಬಾಲಕರು ಎಂದು ತಿಳಿದುಬಂದಿದೆ. ಇವರು ಆಟವಾಡಲು ಈ ಗುಂಡಿ ಬಳಿ ಹೋಗಿದ್ದು, ಉತ್ಸಾಹದಿಂದ ಆ ಗುಂಡಿಯೊಳಗೆ ಹಾರಿದ್ದಾರೆ. ಗುಂಡಿ ಆಳ ಇದ್ದುದರಿಂದ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಆಗಮಿಸಿದ, ಸ್ಥಳೀಯರು ಈ ಬಾಲಕರನ್ನು ಹೊಂಡದಿಂದ ಹೊರ ತೆಗೆಯಲು ಪ್ರಯತ್ನಿಸಿ, ಮೇಲೆತ್ತಿಕೊಂಡು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದಾಗ್ಯೂ, ನಾಲ್ವರು ಬಾಲಕರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. (ಏಜೆನ್ಸೀಸ್)