ನ್ಯೂಸ್

ಆಂಧ್ರಪ್ರದೇಶದಲ್ಲಿ 3,500 ಕೋಟಿ ಮದ್ಯ ಹಗರಣ; ಆರೋಪಪಟ್ಟಿಯಲ್ಲಿ ಮಾಜಿ ಸಿಎಂ ಜಗನ್‌ ಹೆಸರು|jagan-reddy

ಆಂಧ್ರಪ್ರದೇಶ; ಸಾಕಷ್ಟು ಸದ್ದು ಮಾಡಿದ್ದ ಆಂಧ್ರ ಪ್ರದೇಶದ 3,500 ಕೋಟಿ ರೂಪಾಯಿ ಮೊತ್ತದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು 305 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕೆಸಿರೆಡ್ಡಿ ರಾಜಶೇಖ‌ರ್ ರೆಡ್ಡಿ ಸಂಗ್ರಹಿಸಿ, ಅದನ್ನು ವಿಜಯ್ ಸಾಯಿ ರೆಡ್ಡಿ, ಮಿಥುನ್ ರೆಡ್ಡಿ, ಬಾಲಾಜಿ ಅವರಿಗೆ ಹಸ್ತಾಂತರಿಸಿದ್ದರು. ಆ ಬಳಿಕ ಈ ಆರೋಪಿಗಳು ಮಾಜಿ ಮುಖ್ಯಮಂತ್ರಿ ವೆ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ವರ್ಗಾಯಿಸಿದ್ದರು ಎನ್ನಲಾಗಿದೆ. ಆರೋಪಪಟ್ಟಿಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಹೆಸರಿದ್ದರೂ, ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿಲ್ಲ ಎನ್ನಲಾಗಿದೆ.

ದೋಷಾರೋಪ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್‌ ಜಗನ್ ಮೋಹನ್ ರೆಡ್ಡಿಯವರ ಹೆಸರು ಕೂಡ ಕೇಳಿ ಬಂದಿದೆ. ಹಗರಣದ ಲಾಭ ಪಡೆದವರಲ್ಲಿ ಜಗನ್ ಕೂಡ ಒಬ್ಬರು ಎಂದು ಉಲ್ಲೇಖಿಸಲಾಗಿದೆ. 2019 ರಿಂದ 24ರ ವೈಎಸ್‌ಆರ್ ಕಾಂಗ್ರೆಸ್ ಆಡಳಿತದಲ್ಲಿ ಸಿಎಂ ಆಗಿದ್ದ ಜಗನ್ ಅವರಿಗೆ ಪ್ರತಿ ತಿಂಗಳು 50 ರಿಂದ 60 ಕೋಟಿ ರೂ. ಸಂದಾಯವಾಗುತ್ತಿತ್ತು ಎಂದು ಹೇಳಲಾಗಿದೆ.

ಶನಿವಾರ ವಿಶೇಷ ತನಿಖಾ ತಂಡ (SIT) ವಿಚಾರಣೆಯ ಬಳಿಕ ವೈಎಸ್ಆರ್​ಪಿ ಸಂಸದ ಪಿವಿ ಮಿಧುನ್ ರೆಡ್ಡಿ ಅವರನ್ನು ಬಂಧಿಸಿದೆ. ಅವರನ್ನು ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು, ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

(ಏಜೆನ್ಸೀಸ್)

ಇನ್ನೂ ಈ ಮದ್ಯ ಹಗರಣದ ಆರೋಪಟ್ಟಿಯಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಬಗ್ಗೆ ಮತ್ತು ಸಂಸದ ಮಿಧುನ್ ಬಂಧನ ಕುರಿತು ಭಾನುವಾರ(20) ಪ್ರತಿಕ್ರಿಯೆ ನೀಡಿರುವ ಜಗನ್ ಮೋಹನ್ ರೆಡ್ಡಿ, ಇದನ್ನು ಮಾಧ್ಯಮಗಳ ಮುಂದೆ ನಾಟಕವಾಡಲು ಮಾತ್ರ ಸೃಷ್ಟಿಸಲಾಗಿದೆ ಎಂದು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ.