ಚೆನ್ನೈ, ತಮಿಳುನಾಡು: ಬ್ರಿಟಿಷ್ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 29 ರಂದು ಬ್ರಿಟಿಷ್ ನೌಕಾಪಡೆಯಿಂದ ಬಂಧಿತರಾಗಿದ್ದ ತಮಿಳುನಾಡಿನ ಕನಿಷ್ಠ 35 ಮೀನುಗಾರರನ್ನು ಇದೀಗ ಎರಡು ತಿಂಗಳ ಬಳಿಕ ಬಿಡುಗಡೆಗೊಳಿಸಲಾಗಿದ್ದು, ಸೋಮವಾರ ಭಾರತೀಯ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಲಾಗಿದೆ.
ಕರಾವಳಿಯಿಂದ ಸುಮಾರು 230 ನಾಟಿಕಲ್ ಮೈಲುಗಳಷ್ಟು ಆಳ ಸಮುದ್ರದ ಮೀನುಗಾರಿಕೆ ಪ್ರದೇಶಕ್ಕೆ ತೆರಳಿದ್ದ ವೇಳೆ ಬ್ರಿಟಿಷ್ ಹಡಗು ಗ್ರಾಮ್ಪಿಯನ್ ಎಂಡ್ಯೂರೆನ್ಸ್‌ನಿಂದ ಮೀನುಗಾರರನ್ನು ಬಂಧಿಸಿತ್ತು.
ಬಂಧಿತ ಮೀನುಗಾರರನ್ನು BIOT ಗಸ್ತು ನೌಕೆ ಗ್ರಾಂಪಿಯನ್ ಎಂಡ್ಯೂರೆನ್ಸ್ ಮತ್ತು ಅವರ ಸ್ವಂತ ಮೀನುಗಾರಿಕಾ ದೋಣಿಯಲ್ಲಿ ವಿಝಿಂಜಂಗೆ ಸಾಗಿಸಲಾಯಿತು. ಸಮುದ್ರದ ನಡುವೆ ಮೀನುಗಾರರು ಮತ್ತು ಅವರ ಫಿಶಿಂಗ್ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳಾದ ಅನಘ್ ಮತ್ತು ಸಿ 441ಗೆ ಹಸ್ತಾಂತರಿಸಲಾಗಿದೆ,(ಏಜೆನ್ಸೀಸ್).