ನವದೆಹಲಿ: ಯಾತ್ರಾರ್ಥಿಗಳನ್ನು ಹೊತ್ತು ಪಾಕಿಸ್ತಾನದಿದ ಇರಾನ್ಗೆ ತೆರಳುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ಅಪಘಾತ ಸಂಭವಿಸಸಿದ ಪರಿಣಾಮ 35 ಪ್ರಯಾಣಿಕರು ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಇರಾನ್‌ನ ಯಾಜ್ದ್ ಪ್ರಾಂತ್ಯದಲ್ಲಿ ನಡೆದಿದೆ.
ಬಸ್ಸಿನಲ್ಲಿ ಒಟ್ಟು 53 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದ್ದು, ಮೃತಪಟ್ಟವರ ಪೈಕಿ ಬಹುತೇಕರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದವರು ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಬಸ್ನ ಬ್ರೇಕ್ ಸರಿಯಾಗಿ ಹಾಕದೇ ಇರುವುದು ದುರಂತಕ್ಕೆ ಕಾರಣವಾಗಿದ್ದು, 35 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರ ಪೈಕಿ ಏಳು ಜನರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಯಾಗಳಿದ್ದಾರೆ. ಶಿಯಾ ಯಾತ್ರಿಕರು ಇರಾನ್‌ನಿಂದ ಇರಾಕ್‌ಗೆ ಹೋಗುವ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಇಮಾಮ್ ಹುಸೇನ್ ಅವರ ಹುತಾತ್ಮರಾದ 40 ನೇ ದಿನದ ಸ್ಮರಣಾರ್ಥ ಅರ್ಬೈನ್ ಆಚರಣೆಗಾಗಿ ಪ್ರತಿ ವರ್ಷ ಲಕ್ಷಾಂತರ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ. ಪ್ರತಿಬಾರಿಯೂ ಇರಾನ್‌ನ ಈ ರಸ್ತೆಯಲ್ಲಿ ಸಂಭವಿಸುವ ಅಪಘಾತದಲ್ಲಿ 10,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.