ನ್ಯೂಸ್

ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್‌ಗಳು ಇವರು! ಇಲ್ಲಿದೆ ನೋಡಿ ಟಾಪ್​ 30 ಲಿಸ್ಟ್​

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅಪಾರ ಕೀರ್ತಿಯನ್ನು ಗಳಿಸಿರುವ ಕ್ರೀಡಾಪಟುಗಳು ತಮ್ಮ ಕ್ರೀಡಾ ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ ಪಡೆದು, ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇಂದು ವಿಶ್ವದ ಅದೆಷ್ಟೋ ಅಥ್ಲೀಟ್​ಗಳು ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿದ್ದು, ಅಂದಾಜಿಸಲಾರದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಈ ಮೂಲಕ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪೈಕಿ ಟಾಪ್​ 30ರಲ್ಲಿ ಈ ಸ್ಟಾರ್ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕುಸ್ತಿ, ಕ್ರಿಕೆಟ್​, ಫುಟ್​ಬಾಲ್, ಬೇಸ್​ಬಾಲ್​ ಹೀಗೆ ಹಲವಾರು ಕ್ರೀಡಾ ವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಥ್ಲೀಟ್​ಗಳು ಇಂದು ಬಿಲಿಯನ್​, ಮಿಲಿಯನ್​ ಗಟ್ಟಲೇ ಆದಾಯವನ್ನು ಗಳಿಸಿದ್ದಾರೆ. ಈ ಮೂಲಕ ವಿಶ್ವದ ಟಾಪ್​ 30 ಅತ್ಯಂತ ಶ್ರೀಮಂತ ಅಥ್ಲೀಟ್​ಗಳು ಎಂಬ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾದ್ರೆ, ಈ ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ವಿವರ ಹೀಗಿದೆ ಗಮನಿಸಿ.

1. ಮೈಕೆಲ್ ಜೋರ್ಡಾನ್: 2.6 ಬಿಲಿಯನ್ ಡಾಲರ್​

2. ವಿನ್ಸ್ ಮೆಕ್ ಮಹೊನ್: 1.6 ಬಿಲಿಯನ್ ಡಾಲರ್

3. ಅಯಾನ್ ಟಿರಿಯಾಕ್: 1.2 ಬಿಲಿಯನ್ ಡಾಲರ್

4. ಅನ್ನಾ ಕಾಸ್ಪ್ರಜಾಕ್: 1 ಬಿಲಿಯನ್ ಡಾಲರ್

5. ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್​

6. ಟೈಗರ್ ವುಡ್ಸ್: 800 ಮಿಲಿಯನ್ ಡಾಲರ್​

7. ಮ್ಯಾಜಿಕ್ ಜಾನ್ಸನ್: 620 ಮಿಲಿಯನ್ ಡಾಲರ್​

8. ಲೆಬ್ರಾನ್ ಜೇಮ್ಸ್: 600 ಮಿಲಿಯನ್ ಡಾಲರ್​

9. ಎಡ್ಡಿ ಜೋರ್ಡಾನ್: 600 ಮಿಲಿಯನ್ ಡಾಲರ್​

10. ಜೂನಿಯರ್ ಬ್ರಿಡ್ಜ್‌ಮ್ಯಾನ್: 600 ಮಿಲಿಯನ್ ಡಾಲರ್​

11. ಲಿಯೋನೆಲ್ ಮೆಸ್ಸಿ: 600 ಮಿಲಿಯನ್ ಡಾಲರ್​

12. ಮೈಕೆಲ್ ಶುಮಾಕರ್: 600 ಮಿಲಿಯನ್ ಡಾಲರ್​

13. ರೋಜರ್ ಸ್ಟೌಬಾಚ್: 600 ಮಿಲಿಯನ್ ಡಾಲರ್​

14. ರೋಜರ್ ಫೆಡರರ್: 550 ಮಿಲಿಯನ್ ಡಾಲರ್​

15. ಕ್ರಿಸ್ಟಿಯಾನೋ ರೊನಾಲ್ಡೊ: 500 ಮಿಲಿಯನ್ ಡಾಲರ್​

16. ವಿನ್ನಿ ಜಾನ್ಸನ್: 500 ಮಿಲಿಯನ್ ಡಾಲರ್​

17. ಡೇವಿಡ್ ಬೆಕ್‌ಹ್ಯಾಮ್: 450 ಮಿಲಿಯನ್ ಡಾಲರ್​

18. ಫ್ಲಾಯ್ಡ್ ಮೇವೆದರ್: 450 ಮಿಲಿಯನ್ ಡಾಲರ್​

19. ಗ್ರೆಗ್ ನಾರ್ಮನ್: 400 ಮಿಲಿಯನ್ ಡಾಲರ್​

20. ಜ್ಯಾಕ್ ನಿಕ್ಲಾಸ್: 400 ಮಿಲಿಯನ್ ಡಾಲರ್​

21. ಶಾಕ್ವಿಲ್ಲೆ ಓ'ನೀಲ್: 400 ಮಿಲಿಯನ್ ಡಾಲರ್​

22. ಅಲೆಕ್ಸ್ ರೊಡ್ರಿಗಸ್: 350 ಮಿಲಿಯನ್ ಡಾಲರ್​

23. ಡೇಲ್ ಅರ್ನ್‌ಹಾರ್ಡ್ ಜೂನಿಯರ್: 300 ಮಿಲಿಯನ್ ಡಾಲರ್​

24. ಜಾರ್ಜ್ ಫೋರ್‌ಮನ್: 300 ಮಿಲಿಯನ್ ಡಾಲರ್​

25. ನಮಗೆ ಹಕೀಮ್ ಒಲಾಜುವಾನ್: 300 ಮಿಲಿಯನ್ ಡಾಲರ್​

26. ಪೌಲ್​ ಕ್ಯಾಡಿಕ್​: 300 ಮಿಲಿಯನ್ ಡಾಲರ್​

27. ಫಿಲ್ ಮಿಕಲ್ಸನ್: 300 ಮಿಲಿಯನ್ ಡಾಲರ್​

28. ಲೆವಿಸ್ ಹ್ಯಾಮಿಲ್ಟನ್: 285 ಮಿಲಿಯನ್ ಡಾಲರ್​

29. ಫರ್ನಾಂಡೊ ಅಲೋನ್ಸೊ: 260 ಮಿಲಿಯನ್ ಡಾಲರ್​

30. ಗ್ಯಾರಿ ಪ್ಲೇಯರ್: 250 ಮಿಲಿಯನ್ ಡಾಲರ್​