ಸಾಂದರ್ಭಿಕ ಚಿತ್ರ 
ನ್ಯೂಸ್

ಬಾವಿ ನೀರು ಕುಡಿದು 30 ಮಂದಿ ಅಸ್ವಸ್ಥ! ಇಬ್ಬರು ಸಾವು ...Well Water

ತೆಲಂಗಾಣ:  ಬಾವಿ ನೀರು ( Well Water ) ಕುಡಿದು 30 ಮಂದಿ ತೀವ್ರ ಅಸ್ವಸ್ಥಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.   ಈ ಘಟನೆ ಸಂಗಾರೆಡ್ಡಿ ( Sangareddy ) ಜಿಲ್ಲೆಯ ನಾರಾಯಣಖೇಡ್ ಮಂಡಲದ ಸಂಜೀವ ರಾವ್‌ಪೇಟೆಯಲ್ಲಿ  ನಡೆದಿದೆ.

ಮೃತರನ್ನು ಮಹೇಶ್ (22) ಮತ್ತು ಸಾಯಮ್ಮ (70) ಎಂದು ಗುರುತಿಸಲಾಗಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 30ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳವೆಬಾವಿ ನೀರು ಕುಡಿದ ಕೂಡಲೇ ಗ್ರಾಮದ ಹಲವರು ವಾಂತಿ, ಬೇಧಿಯಿಂದ ಬಳಲುತ್ತಿದ್ದರು. ನೀರು ಕುಡಿದ ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥರಾಗಿದ್ದಾರೆ. ಅವರನ್ನು ಹತ್ತರದ ಆಸ್ಪತ್ರೆಗಳಿಗೆ ರವಾನಿಸಲಾಯಿತು ಮತ್ತು ವೈದ್ಯರು ಚಿಕಿತ್ಸೆ ಪ್ರಾರಂಭಿಸಿದರು. ಕಲುಷಿತ ನೀರಿಗೆ ತುತ್ತಾದವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.

ಕೊಳವೆಬಾವಿ ನೀರು ಕುಡಿದು ವಾಂತಿ, ಭೇದಿ ಕಾಣಿಸಿಕೊಂಡು ಜನ ಆಸ್ಪತ್ರೆಗಳಿಗೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸಂತ್ರಸ್ತರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಸ್ಥರ ನೀರಿಗಾಗಿ ಪರಿವರ್ತಿತವಾಗಿರುವ ಬಾವಿಯ ನೀರನ್ನು ಯಾರೂ ಕುಡಿಯಬಾರದು ಎಂದು  ಘೋಷಿಸಿದ್ದಾರೆ.