
ಹೈದರಾಬಾದ್: ಟ್ರಾಫಿಕ್ ಪೊಲೀಸ್( Traffic Inspector ) ಕೂಡ ಒಬ್ಬರು ದಿನನಿತ್ಯದ ಕರ್ತವ್ಯದ ಭಾಗವಾಗಿ ಸೈಕಲ್ನಲ್ಲಿ ( Bicycle) ಬರುತ್ತಾರೆ. ಯಾಕೆ ಈ ನಿರ್ಧಾರಕ್ಕೆ ಅಧಿಕಾರಿ ಬಂದಿದ್ದಾರೆ ಎಂದು ತಿಳಿದಿರೆ ಖಂಡಿತಾ ನಿಮಗೂ ಆಶ್ಚರ್ಯವಾಗುತ್ತದೆ. ಬನ್ನಿ ಅಧಿಕಾರಿ ಈ ನಿರ್ಧಾರದ ಹಿಂದೆ ಇರುವ ಕಾರಣ ತಿಳಿಯೋಣ….
ಆನಂದ್ ಹೈದರಾಬಾದ್ ನಗರದ ಬೇಗಂಪೇಟೆ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸ್( Inspector) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆಯೋ ಹಾಗೆಯೇ ಮಾಲಿನ್ಯದ ಪ್ರಭಾವವೂ ಇದೆ. ವಿಪರೀತ ಮಾಲಿನ್ಯದಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಹಲವಾರು ವರ್ಷಗಳಿಂದ ಟ್ರಾಫಿಕ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಧೂಳು ಮತ್ತು ಮಾಲಿನ್ಯವನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಂಡರು. ಇನ್ನು ಮುಂದೆ ಸೈಕಲ್ ನಲ್ಲೇ ಕರ್ತವ್ಯ ನಿರ್ವಹಿಸಬೇಕೆಂದು ನಿರ್ಧರಿಸಿದ್ದಾರೆ.
ಮನೆಯಿಂದಲೂ ಆ ಸೈಕಲ್‌ನಲ್ಲಿಯೇ ಡ್ಯೂಟಿಗೆ ಬರುತ್ತೇನೆ. ಹೆಚ್ಚಿರುವ ಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ತರುವಲ್ಲಿ ನನ್ನ ಪಾಲಿನ ಕೆಲಸವನ್ನು ಮಾಡಲು ಈ ನಿರ್ಧಾರ ಕೈಗೊಂಡೆ. ಇದನ್ನು ನೋಡಿ ನಮ್ಮಲ್ಲಿ ಹಲವರು ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆಯೇ? ಎಂದು ಭಾವಿಸಬಹುದು. ಕಲ್ಪನೆಯು ಚಿಕ್ಕದಾಗಿದೆ ಆದರೆ ಅದರ ಹಿಂದೆ ಅದ್ಭುತ ಫಲಿತಾಂಶಗಳು ಬರುವುದು ಖಚಿತ ಎಂದಿದ್ದಾರೆ. ಈ ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಧಿಕಾರಿಯ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.