ನ್ಯೂಸ್

3 ಮದುವೆ, 1.25 ಕೋಟಿ ರೂಪಾಯಿ! ಪೊಲೀಸರ ಕೈಗೆ ಸಿಕ್ಕಿಬಿದ್ದ ವಂಚಕಿಯ ಕತೆ ಕೇಳಿದ್ರೆ ಹೌಹಾರ್ತೀರಿ | Looting Bride

Looting Bride : ವಿಚ್ಛೇದಿತ ಮತ್ತು ವಿಧುರ ಶ್ರೀಮಂತರನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿದ್ದ ಖತರ್ನಾಕ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಸಾಕಷ್ಟು ಗಂಡಸರನ್ನು ಮದುವೆಯಾಗಿ 1.25 ಕೋಟಿ ರೂ. ವಂಚಿಸಿದ ಸುಮಾರು 1 ದಶಕದ ಬಳಿಕ ಆಕೆಯನ್ನು ಬಂಧಿಸಲಾಗಿದೆ.

ಬಂಧಿಳತನ್ನ ನಿಕ್ಕಿ ಅಲಿಯಾಸ್ ಸೀಮಾ ಎಂದು ಗುರುತಿಸಲಾಗಿದೆ. ಈಕೆಯನ್ನು ಲೂಟಿಂಗ್​ ಬ್ರೈಡ್​ ಎಂದೇ ಕರೆಯಲಾಗುತ್ತದೆ. ಈಕೆ ಆಗ್ರಾದ ಉದ್ಯಮಿ, ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಜೈಪುರದ ಆಭರಣ ವ್ಯಾಪಾರಿಗಳು ಸೇರಿದಂತೆ ಅನೇಕರಿಗೆ ವಂಚಿಸಿದ್ದಾಳೆ. ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ವಂಚಕಿ ಪೊಲೀಸರ ಬಲಗೆ ಬಿದ್ದಿದ್ದಾಳೆ. ಉದ್ಯಮಿಗೆ 75 ಲಕ್ಷ, ಇಂಜಿನಿಯರ್‌ಗೆ 10 ಲಕ್ಷ ಹಾಗೂ ಆಭರಣ ವ್ಯಾಪಾರಿಗೆ 36.5 ಲಕ್ಷ ರೂಪಾಯಿ ವಂಚನೆ ಮಾಡಿರುವುದು ಬಯಲಾಗಿದೆ.

ವಂಚಕಿ ಸೀಮಾ 2017ರಲ್ಲಿ ಗುರುಗ್ರಾಮ್‌ದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮದುವೆಯಾದಳು. ಬಳಿಕ ಆತನಿಂದ ಬೇರೆಯಾದ ನಂತರ ಆ ವ್ಯಕ್ತಿಯಿಂದ 10 ಲಕ್ಷವನ್ನು ಸೆಟಲ್‌ಮೆಂಟ್ ಆಗಿ ಪಡೆದುಕೊಂಡಳು. ನಂತರ 2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ಸೀಮಾ ವಿವಾಹವಾದಳು. ಶೀಘ್ರದಲ್ಲೇ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಉದ್ಯಮಿ ಮನೆಯಿಂದ ಆಕೆ ಪರಾರಿಯಾಗಿದಳು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.

34 ವರ್ಷ ವಯಸ್ಸಿನ ಸೀಮಾ ತನ್ನ ಬಲಿಪಶುಗಳನ್ನು ಮ್ಯಾಟ್ರಿಮೋನಿಯಲ್ ಸೈಟ್​ಗಳ ಮೂಲಕ ಹುಡುಕುತ್ತಿದ್ದಳು. ಶ್ರೀಮಂತ ವಿಚ್ಛೇದಿತರು ಮತ್ತು ವಿಧುರರೇ ಈಕೆಯ ಟಾರ್ಗೆಟ್​. ಮೊದಲು ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಳು. ಅದರಲ್ಲೂ ಅವರ ಆಸ್ತಿಗಳ ಬಗ್ಗೆ ಮಾಹಿತಿ ಕಲೆಯಾಕುತ್ತಿದ್ದಳು. ಶ್ರೀಮಂತ ಅಂತ ಗೊತ್ತಾದ ಬಳಿಕ ಆಕೆ ಆತನನ್ನು ಪರಿಚಯ ಮಾಡಿಕೊಂಡು ಮದುವೆಯಾಗುತ್ತಿದ್ದಳು.

ಕುಟುಂಬದವರ ವಿಶ್ವಾಸವನ್ನು ಗಳಿಸಲು ಮದುವೆಯಾದವರೊಂದಿಗೆ ಮೂರ್ನಾಲ್ಕು ತಿಂಗಳುಗಳ ಕಾಲ ಯಾವುದೇ ಅನುಮಾನ ಬರದಂತೆ ಸಂಸಾರ ನಡೆಸುತ್ತಿದ್ದಳು. ಈ ಸಮಯದಲ್ಲಿ ತನ್ನ ಮುಂದಿನ ಪ್ಲಾನ್​ ಏನು ಎಂಬುದನ್ನು ತಯಾರಿ ಮಾಡಿಕೊಳ್ಳುತ್ತಿದ್ದಳು. ಇದಾದ ಬಳಿಕ ಸಮಯವನ್ನು ನೋಡಿ ಹಣದ ಜತೆಗೆ ಎಲ್ಲವನ್ನು ದೋಚಿಕೊಂಡು ಮನೆಯಿಂದ ನಾಪತ್ತೆಯಾಗುತ್ತಾಳೆ. ತನ್ನ ಬಗ್ಗೆ ಯಾರಿಗಾದರೂ ಹೇಳಿದರೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಾಳೆ.

ಡೆಹ್ರಾಡೂನ್‌ನಲ್ಲಿರುವ ಆಕೆಯ ಪತಿ ಮತ್ತು ಕುಟುಂಬಕ್ಕೆ ಬೆದರಿಕೆ ಹಾಕಿದ್ದಳು. ಜೈಪುರ ಪೊಲೀಸರು ಒಂದು ತಿಂಗಳ ತನಿಖೆಯ ನಂತರ ಆಕೆಯನ್ನು ಬಂಧಿಸಿದ್ದಾರೆ. ಆಕೆಯಿಂದ ವಂಚನೆಗೆ ಒಳಗಾದವರು ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 14 ದಿನಗಳ ಕಾಲ ರಿಮಾಂಡ್​ಗೆ ನೀಡಲಾಗಿದೆ. (ಏಜೆನ್ಸೀಸ್​)