ನ್ಯೂಸ್

ಕುದಿಯುವ ನೀರಿಗೆ 3ಕೆಜಿ ಸಕ್ಕರೆ ಹಾಕಿ ಗಂಡನ ಮೈ ಮೇಲೆ ಸುರಿದ ಹೆಂಡತಿ! ಇಷ್ಟಕ್ಕೆಲ್ಲ ಕಾರಣ ಅದೊಂದೇ ಕಾಲ್!

ಲಂಡನ್: 59 ವರ್ಷದ ಮಹಿಳೆಯೊಬ್ಬಳು ತನ್ನ 81 ವರ್ಷದ ಗಂಡನ ದೇಹದ ಮೇಲೆ ಸಕ್ಕರೆ ನೀರು ಎರಚಿ ಕೊಲೆ ಮಾಡಿರುವ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಅಷ್ಟಕ್ಕೂ ಈ ಕೊಲೆಗೆ ಕಾರಣ ಒಂದೇ ಒಂದು ಫೋನ್​ ಕರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಕೊರಿನಾ ಬೈನ್ಸ್(59) ಕೊಲೆ ಮಾಡಿರುವ ಮಹಿಳೆ. ಆಕೆ ಆಕೆಯ ಮಗಳೊಂದಿಗೆ ಶಾಪಿಂಗ್​ಗೆ ಹೋಗಿದ್ದಳಂತೆ. ಆದರೆ ಆಕೆಯ ಗಂಡನಿಗೆ ಮನೆಯಲ್ಲಿ ಕೆಲಸವಿದ್ದಿದ್ದರಿಂದ ಹೆಂಡತಿಗೆ ಕರೆ ಮಾಡಿ ಬೇಗ ಬರಲು ಹೇಳಿದ್ದಾಳೆ. ಆ ವೇಳೆ ಆಕೆ ಏನೂ ಹೇಳದೆ ಸುಮ್ಮನಾಗಿದ್ದಾಳೆ. ಗಂಡ ಬೇಗ ಬರಲು ಹೇಳಿದ್ದಕ್ಕೆ ಸಿಟ್ಟಾಗಿದ್ದ ಆಕೆ ಮನೆಗೆ ಬಂದೊಡನೆ ಒಂದು ಬಕೆಟ್ ನೀರು ಕಾಯಲು ಇಟ್ಟಿದ್ದಾಳೆ. ನೀರಿಗೆ ಮೂರು ಕೆಜಿ ಸಕ್ಕರೆ ಹಾಕಿ ಕುದಿಸಿದ್ದಾಳೆ.

ಕುದಿಯುತ್ತಿದ್ದ ಸಕ್ಕರೆ ನೀರನ್ನು ತೆಗೆದುಕೊಂಡು ಹೋಗಿ ಮಲಗಿದ್ದ ಗಂಡನ ಮೇಲೆ ಎರಚಿದ್ದಾಳೆ. ಗಂಡ ನೋವಿನಿಂದ ಕಿರುಚಾಡುತ್ತಿದ್ದಾಗ ಆ್ಯಂಬುಲೆನ್ಸ್​ಗೆ ಕರೆ ಮಾಡಿ, ಪಕ್ಕದ ಮನೆಗೆ ಹೋಗಿದ್ದಾಳೆ. ಅಲ್ಲಿ ತಾನು ಮಾಡಿದ ಕೆಲಸವನ್ನು ಹೇಳಿಕೊಂಡು ಪಶ್ಚಾತಾಪ ಪಡಲಾರಂಭಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಹಿಳೆಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. (ಏಜೆನ್ಸೀಸ್)