Earthquakes: ಮಣಿಪುರದಲ್ಲಿ ಬುಧವಾರ ಮೂರು ಬಾರಿ ಸರಣಿ ಭೂಕಂಪ ಸಂಭವಿಸಿದ್ದು, ಅವುಗಳಲ್ಲಿ 5.2 ತೀವ್ರತೆಯ ಭೂಕಂಪ ಅತ್ಯಂತ ಪ್ರಬಲವಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಇದನ್ನೂ ಓದಿ:ಎರಡು ದಿನಗಳ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟನೆ *ಪ್ರಜಾತಂತ್ರ ನಾಶ ಮಾಡಲು ಯಾರಿಂದ ಸಾಧ್ಯವಿಲ್ಲ-ಶಿವಸುಂದರ್
ಚುರಚಂದ್‌ಪುರ ಜಿಲ್ಲೆಯಲ್ಲಿ ಬೆಳಗಿನ ಜಾವ 1.54 ಕ್ಕೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ನೋನಿ ಜಿಲ್ಲೆಯಲ್ಲಿ ಬೆಳಗ್ಗೆ 2.26ಕ್ಕೆ 2.5 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ, ಬೆಳಗ್ಗೆ 10.23ಕ್ಕೆ ಚುರಚಂದ್‌ಪುರದಲ್ಲಿ 3.9 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಮಳೆಗೆ ಪಿಯು ಕಾಲೇಜಿನ ಗೋಡೆ ಒದ್ದೆ *ಮಕ್ಕಳ ದಾಖಲಾತಿಗೆ ಪಾಲಕರ ಹಿಂದೇಟು * 9ರಲ್ಲಿ 5 ಕೊಠಡಿಗಳು ಶಿಥಿಲಾವಸ್ಥೆ
ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)