ನ್ಯೂಸ್

VIDEO| ಕುನೋ ರಾಷ್ಟ್ರೀಯ ಉದ್ಯಾನವನ: ಮೂರು ಚಿರತೆ ಮರಿಗಳು ಜನನ

ಮಧ್ಯಪ್ರದೇಶ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಂದು ಹೆಣ್ಣು ಚಿರತೆಯೊಂದು ಮೂರು ಮರಿಗಳಿಗೆ ಜನ್ಮ ನೀಡಿದ್ದು, ಈ ಮಾಹಿತಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ತಿಳಿಸಿದ್ದಾರೆ.

"ಕುನೋದ ಹೊಸ ಮರಿಗಳು! ಜ್ವಾಲಾ ಎಂಬ ಹೆಸರಿನ ನಮೀಬಿಯಾ ಚಿರತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದು ನಮೀಬಿಯಾದ ಚಿರತೆ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳ ನಂತರದಲ್ಲಿ ಮರಿಹಾಕಿದೆ. ದೇಶದಾದ್ಯಂತ ಎಲ್ಲಾ ವನ್ಯಜೀವಿ ಪ್ರೇಮಿಗಳು ಈ ವಿಷಯ ತಿಳಿದ ತಕ್ಷಣ ಶುಭಾಶಯಗಳನ್ನು ವ್ಯಕ್ತಪಡಿಸಿದ್ದೀರಿ ಅದಕ್ಕೆ ವಿಶೇಷ ಧನ್ಯವಾದಗಳು. ಭಾರತ ವನ್ಯಜೀವಿಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಪೋಸ್ಟ್​ ಮಾಡಿದ್ದಾರೆ.

ಇದಕ್ಕೂ ಮುನ್ನ ಜನವರಿ 3ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆಯೊಂದು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಚೀತಾ ಯೋಜನೆಯಡಿ ತಾಯಿ ಚಿರತೆ ಜ್ವಾಲಾ ಸೇರಿದಂತೆ 8 ಚಿರತೆಗಳನ್ನು ಸೆಪ್ಟೆಂಬರ್ 17, 2022ರಂದು ನಮೀಬಿಯಾದಿಂದ ಕುನೋಗೆ ತರಲಾಯಿತು,(ಏಜೆನ್ಸೀಸ್).