ನ್ಯೂಸ್

ಪತಿಯ 80 ಸಾವಿರ ಸಾಲ ತೀರಿಸದ ಹಿನ್ನೆಲೆ ಮರಕ್ಕೆ ಕಟ್ಟಿಹಾಕಿ 29ರ ಮಹಿಳೆಗೆ ಥಳಿತ: ವಿಡಿಯೋ ವೈರಲ್​ | Loan

Loan: ಪತಿಯ 80 ಸಾವಿರ ರೂ. ಮರುಪಾವತಿಸದ ಹಿನ್ನೆಲೆ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸುತ್ತಿರುವ ಅಘಾತಕಾರಿ ಪ್ರಕರಣವೊಂದು ಆಂಧ್ರದ ಚಿತ್ತೂರಿನಲ್ಲಿ ಬೆಳಕಿಗೆ ಬಂದಿದೆ.

ಗಂಡ ಮಾಡಿದ್ದ 80 ಸಾವಿರ ರೂ. ಸಾಲ ಮರುಪಾವತಿಸದ ಹಿನ್ನೆಲೆ 29ರ ಸಿರಿಷಾ ಎಂಬ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ಅವಮಾನಿಸಲಾಗಿದೆ.ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಘಟನೆ ಏನು..?

ಚಿತ್ತೂರಿನ ಗ್ರಾಮಸ್ಥರಿಂದ ಆಕೆ ಪತಿ ತಿಮ್ಮರಾಯಪ್ಪ ಕೆಲ ವರ್ಷಗಳಿಂದೆ 80,000 ರೂ. ಸಾಲ ಮಾಡಿದ್ದನು. ಬಳಿಕ ಅದನ್ನು ಈವರೆಗೂ ಮರುಪಾವತಿಸಿಲ್ಲ. ಅಲ್ಲದೆ, ಕೆಲ ತಿಂಗಳುಗಳಿಂದ ಊರಿನಲ್ಲಿ ಕೂಡ ಕಾಣುತ್ತಿಲ್ಲ. ಈ ಹಿನ್ನೆಲೆ ಸಿರಿಷಾನನ್ನು ಕೇಳಿದ್ದಾರೆ. ಆಕೆ, ನನ್ನ ಕೈಯಲ್ಲಿ ಆಗಲ್ಲ. ನನ್ನ ಪತಿ ನನ್ನ ಬಿಟ್ಟು ಓಡಿಹೋಗಿದ್ದಾನೆ. ಕಳೆದ 6 ತಿಂಗಳಿಂದ ನನ್ನ ಸಂಪರ್ಕದಲ್ಲಿ ಇಲ್ಲ. ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಈ ಹಿನ್ನೆಲೆ ಮರುಪಾವತಿಗೆ ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತ ಸಾಲ ನೀಡಿದ ಕುಂಟುಂಬದ ಪ್ರಕಾರ, ಆಕೆ ಊರು ಬಿಟ್ಟು ಬೆಂಗಳೂರಿಗೆ ತೆರಳುತ್ತಿದ್ದಾಳೆ. ತನ್ನ ಪತಿ ಅಲ್ಲೇ ಇದ್ದಾನೆ. ಅವನ ಬಳಿಗೆ ಹೋಗುತ್ತಿದ್ದಾಳೆ. ಈ ಹಿನ್ನೆಲೆ ಅವಳನ್ನು ಹಿಡಿದಿಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲು

ಇನ್ನು ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಹಿನ್ನೆಲೆ ಮುನಿಕನ್ನಪ್ಪ ಮತ್ತು ಆತನ ಕುಟುಂಬ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡುಕೃತ್ಯವನ್ನು ಖಂಡಿಸಿದ್ದಾರೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ(ಏಜೆನ್ಸೀಸ್​​)