ನ್ಯೂಸ್

4ನೇ ವಾರಕ್ಕೆ ತಲೈವಾ ನಟನೆಯ 'ಜೈಲರ್​' ಗಳಿಸಿದ್ದೆಷ್ಟು?; ಇಲ್ಲಿದೆ ಮಾಹಿತಿ

ತಮಿಳುನಾಡು: ಕಾಲಿವುಡ್​ ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ನಟನೆಯ 'ಜೈಲರ್' ಆಗಸ್ಟ್​ 10 ರಂದು ಬಿಡುಗಡೆಗೊಂಡು ಇಂದಿಗೂ ಬಾಕ್ಸ್​ ಆಫೀಸ್​ನಲ್ಲಿ ತನ್ನ ಭರ್ಜರಿ ಬೇಟೆಯನ್ನು ಯಶಸ್ವಿಯಾಗಿ ಮುಂದುವರಿಸಿದೆ.

ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಕಾಣುವ ಮುಖೇನ 2023ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಚಲನಚಿತ್ರ ಎಂಬ ಹೆಗ್ಗಳಿಕೆಗೆ ಇದೀಗ 'ಜೈಲರ್'​ ಪಾತ್ರವಾಗಿದೆ. ಚಿತ್ರವು ಪ್ರಸ್ತುತ ನಾಲ್ಕನೇ ವಾರದತ್ತ ತಲುಪ್ಪಿದ್ದು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇತ್ತೀಚಿನ ವರದಿಯ ಪ್ರಕಾರ, ಸಿನಿಮಾ ಜಾಗತೀಕವಾಗಿ 600 ಕೋಟಿ ರೂ. ಗಳಿಕೆ ಕಂಡಿದೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಅಧಿಕೃತವಾಗಿ ಘೋಷಿಸಬೇಕಿದೆ.

ಭಾರತದಲ್ಲಿ 27ನೇ ದಿನಕ್ಕೆ ಚಿತ್ರವು 1.35 ಕೋಟಿ ರೂ. ಗಳಿಕೆಯನ್ನು ಕಂಡಿದ್ದು, ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ರಿಲೀಸ್​ ಆದ ಮೊದಲ ದಿನದಿಂದ ಇಲ್ಲಿಯವರೆಗೂ ಒಟ್ಟು 339.73 ಕೋಟಿ ರೂ. ಆದಾಯವನ್ನು ಗಳಿಸಿದೆ.

ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ 'ಜೈಲರ್' ಚಿತ್ರದಲ್ಲಿ ರಜನಿಕಾಂತ್, ತಮನ್ನಾ ಭಾಟಿಯಾ, ವಿನಾಯಕನ್, ರಮ್ಯಾ ಕೃಷ್ಣನ್ ವಸಂತ ರವಿ, ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್ ಸೇರಿದಂತೆ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).