ನ್ಯೂಸ್

ಪ್ರತಿ ವರ್ಷ ಈತನ ಜತೆ ಕನ್ಯತ್ವ ಕಳೆದುಕೊಳ್ಳುತ್ತಾರೆ 25 ಹುಡುಗಿಯರು! ಕನ್ಯೆಯರ ಆಯ್ಕೆ ವಿಧಾನವೇ ಭಯಾನಕ

ಸಿಯೋಲ್​: ಜಗತ್ತಿನಲ್ಲಿ ಒಬ್ಬ ನಿಗೂಢ ವ್ಯಕ್ತಿಯಿದ್ದಾನೆ. ಆತ ಒಂದು ರಾಷ್ಟ್ರದ ಸರ್ವಾಧಿಕಾರಿ ಎಂದೇ ಕುಖ್ಯಾತಿಯಾಗಿದ್ದಾನೆ. ಆತನ ನಡೆಯಂತೂ ಅತ್ಯಂತ ನಿಗೂಢವಾಗಿದೆ. ಅಲ್ಲದೆ, ಜಗತ್ತಿಗೆ ಅಪಾಯಕಾರಿ ಎಂದೆನಿಸುತ್ತದೆ. ನೋಡಲು ಕುಳ್ಳಗಿದ್ದರೂ ಆತನ ಕ್ರಿಮಿನಲ್​ ಬುದ್ಧಿ ಮಾತ್ರ ಬಹಳ ದೊಡ್ಡದಿದೆ. ತನ್ನ ದೇಶದ ಒಂದಿಂಚೂ ಮಾಹಿತಿ ಕೂಡ ಹೊರ ಹೋಗದಂತೆ ಕಾವಲು ಇಟ್ಟಿದ್ದಾನೆ. ಜನರಿಗೆ ಸದಾ ಕಠಿಣ ನಿಯಮಗಳನ್ನು ಹೇರುತ್ತಿರುತ್ತಾನೆ. ಹೀಗಾಗಿಯೇ ಆತನ ದೇಶ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ಕೊಡುವುದೇ ಆತನ ಕೆಲಸ. ಶಸ್ತ್ರಾಸ್ತ್ರಗಳು ಆತನಿಗೆ ಪಟಾಕಿಯಿದ್ದಂತೆ. ಹೀಗಾಗಿಯೇ ಆಗಾಗ ಕ್ಷಿಪಣಿಗಳ ಪರೀಕ್ಷೆ ಮಾಡುತ್ತಲೇ ಇರುತ್ತಾನೆ. ಆ ದೇಶದಲ್ಲಿ ಆತ ಹೇಳದ್ದೇ ಕಾನೂನು ಮತ್ತು ಶಾಸನ. ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಎಂಬ ಸುಳಿವು ನಿಮಗೆ ಈಗಾಗಲೇ ಸಿಕ್ಕಿರಬಹುದು. ಆತ ಬೇರೆ ಯಾರೂ ಅಲ್ಲ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್​.

ಅಷ್ಟಕ್ಕೂ ಕಿಮ್​ ಜಾಂಗ್​ ಉನ್​ ಬಗ್ಗೆ ಈಗ್ಯಾಕೆ ಮಾತು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೊಂದು ಕಾರಣವಿದೆ. ಕಿಮ್​ ಜಾಂಗ್​ ಕುರಿತಾದ ಆಘಾತಕಾರಿ ಮಾಹಿತಿಯೊಂದು ಇದೀಗ ಹೊರ ಬಿದ್ದಿದೆ. ಅದೇನೆಂದರೆ, ಕಿಮ್​ ಜಾಂಗ್​ ಆಸೆಗಳನ್ನು ತೀರಿಸಲು ಪ್ರತಿ ವರ್ಷ 25 ಹುಡುಗಿಯರು ತಮ್ಮ ಕನ್ಯತ್ವವನ್ನು ಕಳೆದುಕೊಳ್ಳಬೇಕಾಗುತ್ತದೆಯಂತೆ.

ಉತ್ತರ ಕೊರಿಯಾದಲ್ಲಿ ಇಂಥದ್ದೊಂದು ದುಷ್ಕೃತ್ಯ ನಡೆಯುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಜಗತ್ತಿನಲ್ಲಿ ಎಲ್ಲರೂ ಒಂದೇ ರೀತಿ ಬದುಕಿದರೆ, ಕಿಮ್ ಜಾಂಗ್​ ಆಳ್ವಿಕೆ ನಡೆಸುತ್ತಿರುವ ಉತ್ತರ ಕೊರಿಯಾದ ಜನರ ಪ್ರಪಂಚವೇ ಬೇರೆ. ಕಿಮ್‌ ಜಾಂಗ್​ನ ಚಿತ್ರಹಿಂಸೆ ಅಷ್ಟಿಷ್ಟಲ್ಲ. ಸಣ್ಣಪುಟ್ಟ ಅಪರಾಧಗಳಿಗೂ ಕಠಿಣ ಶಿಕ್ಷೆ ನೀಡುತ್ತಾನೆ. ತಾನೇ ದೇವರು ಎಂಬ ನಿಯಮವನ್ನು ದೇಶದಲ್ಲಿ ಜಾರಿ ಮಾಡಿದ್ದಾನೆ. ಆತನ ಮಾತೇ ಕಾನೂನು ಎಂದು ಅವರು ಹೇಳುತ್ತಾರೆ. ನಿಯಮಗಳನ್ನು ಪಾಲಿಸದಿದ್ದರೆ ಆತನಿಗೆ ಸಾವೇ ಶಿಕ್ಷೆ. ಇದೀಗ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದಿರುವ ಯೆನ್ಮಿ ಪಾರ್ಕ್ ಎಂಬ ಯುವತಿ ಕಿಮ್ ಜಾಂಗ್​ ಬಗ್ಗೆ ಸಂಚಲನಾತ್ಮಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ. ಕಿಮ್ ಜಾಂಗ್​ ಆಸೆಗಳನ್ನು ಪೂರೈಸಲು ಸುಂದರ ಹುಡುಗಿಯರನ್ನು ಹೊಂದಿರುವ 'ಪ್ಲೇಷರ್ ಸ್ಕ್ವಾಡ್' ಎಂಬ ಗುಂಪು ಇರುತ್ತದೆ ಎಂದು ಯೆನ್ಮಿ ಪಾರ್ಕ್ ಹೇಳಿದ್ದಾರೆ. ಪ್ರತಿ ವರ್ಷ ಕಿಮ್ ಜಾಂಗ್​ 25 ಕನ್ಯೆಯರನ್ನು ಆಯ್ಕೆ ಮಾಡುತ್ತಾರೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾಳೆ.

ಯೆನ್ಮಿ ಪಾರ್ಕ್ ಪ್ರಕಾರ ಹುಡುಗಿಯರ ಸೌಂದರ್ಯ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಕನ್ಯೆಯರನ್ನು ಆಯ್ಕೆ ಮಾಡಲಾಗುತ್ತದೆ. ಯೆನ್ಮಿ ಪಾರ್ಕ್ ಅವರು ಪ್ಲೇಷರ್ ಸ್ಕ್ವಾಡ್​ಗೆ ಎರಡು ಬಾರಿ ಆಯ್ಕೆಯಾದರು ಕೂಡ ಅವರ ಕುಟುಂಬದ ಸ್ಥಾನಮಾನದ ಆಧಾರದ ಮೇಲೆ ತಂಡಕ್ಕೆ ಸೇರಿಸಲಾಗಿಲ್ಲ ಎಂದು ಹೇಳಿದ್ದಾರೆ. ಕಿಮ್​ ಜಾಂಗ್​ ಕಡೆಯವರು ಶಾಲೆಗಳಿಗೆ ಹೋಗಿ ಸುಂದರ ಹುಡುಗಿಯರನ್ನು ಹುಡುಕುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಪ್ರತಿ ತರಗತಿಯ ಕೊಠಡಿಯನ್ನು ಹುಡುಕಿ ಸುಂದರ ಕನ್ಯೆಯರನ್ನು ಆರಿಸುತ್ತಾರೆ. ಹೆಣ್ಣು ಸುಂದರವಾಗಿದ್ದರೆ ಆ ಹುಡುಗಿಯ ಕೌಟುಂಬಿಕ ಹಿನ್ನೆಲೆ, ಅವರ ಸ್ಥಿತಿಗತಿ, ರಾಜಕೀಯ ಸ್ಥಿತಿಗತಿ ತಿಳಿದುಕೊಳ್ಳುತ್ತಾರೆ. ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡ ಕುಟುಂಬದ ಸದಸ್ಯರು ಅಥವಾ ದಕ್ಷಿಣ ಕೊರಿಯಾಕ್ಕೆ ಸಂಬಂಧಿಸಿದ ಹಾಗೂ ಇತರ ದೇಶಗಳ ಸಂಬಂಧಿಕರ ಮಕ್ಕಳನ್ನು ಪ್ಲೆಷರ್ ಸ್ಕ್ವಾಡ್‌ಗೆ ಸೇರಿಸಲಾಗುವುದಿಲ್ಲ.

ಇನ್ನೂ ಸುಂದರ ಹುಡುಗಿಯರನ್ನು ಆಯ್ಕೆ ಮಾಡಿದ ನಂತರ, ಅವರ ಕನ್ಯತ್ವ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವೈದ್ಯಕೀಯ ಪರೀಕ್ಷೆಗಳಲ್ಲಿ ಒಂದು ಸಣ್ಣ ದೋಷವನ್ನು ಸಹ ಒಪ್ಪಿಕೊಳ್ಳುವುದಿಲ್ಲ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 25 ಹುಡುಗಿಯರನ್ನು ಮಾತ್ರ ರಾಜಧಾನಿ ಪ್ಯೊಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅವರು ಇಷ್ಟಪಡಲಿ ಅಥವಾ ಇಲ್ಲದಿರಲಿ ಕಿಮ್ ಜಾಂಗ್​ ಉನ್​ ಅವರ ಆಸೆಗಳನ್ನು ಪೂರೈಸಬೇಕು ಎಂದು ಯೆನ್ಮಿ ಪಾರ್ಕ್ ಹೇಳಿದ್ದಾರೆ.

ಈ 25 ಹುಡುಗಿಯರಲ್ಲಿ ಕೆಲವರು ಮಸಾಜ್ ಮಾಡಲು, ಕೆಲವರು ಹಾಡಲು ಮತ್ತು ನೃತ್ಯ ಮಾಡಲು, ಕೆಲವರು ಕಿಮ್‌ ಜಾಂಗ್​ನ ತಾರ್ಕಿಕ ಆಸೆಗಳನ್ನು ಪೂರೈಸಲು ಮತ್ತು ಆತನಿಗಾಗಿ ಕೆಲಸ ಮಾಡುವ ಉನ್ನತ ಅಧಿಕಾರಿಗಳ ಆಸೆಗಳನ್ನು ಪೂರೈಸಲು ವಿಂಗಡಿಸಲಾಗಿದೆ. ಕಿಮ್‌ ಜಾಂಗ್​ಗಾಗಿ ಅತ್ಯಂತ ಸುಂದರ ಹುಡುಗಿಯರನ್ನು ಇರಿಸಲಾಗುವುದು ಎಂದು ಪಾರ್ಕ್ ಬಹಿರಂಗಪಡಿಸಿದ್ದಾರೆ. ಸ್ವಲ್ಪ ಸುಂದರ ಮತ್ತು ಸಾಧಾರಣ ಸುಂದರಿಯರನ್ನು ಕೆಳ ಹಂತದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಇಚ್ಛೆಗಳನ್ನು ಪೂರೈಸಲು ನಿಯೋಜಿಸಲಾಗುತ್ತದೆಯಂತೆ.

ಒಂದು ವರದಿಯ ಪ್ರಕಾರ ಹುಡುಗಿಯರು 20 ವರ್ಷ ತುಂಬಿದಾಗ ಅವರನ್ನು ಪ್ಲೇಷರ್ ಸ್ಕ್ವಾಡ್​ನಿಂದ ತೆಗೆದುಹಾಕಲಾಗುತ್ತದೆ. ಆದರೆ ಅವರಲ್ಲಿ ಕೆಲವರು ಕಿಮ್‌ನ ಬಾಡಿ ಗಾರ್ಡ್‌ಗಳನ್ನು ಮದುವೆಯಾಗುತ್ತಾರೆ. ಆದರೆ ಈ ಸಂತೋಷ ತಂಡವು ಕಿಮ್ ಅವರ ತಂದೆ ಕಿಮ್ ಜೊಂಗ್ 2ರ ಸಮಯಕ್ಕೂ ಹಿಂದಿನದು. ಈ ವ್ಯವಸ್ಥೆಯು 1970ರ ದಶಕದಿಂದಲೂ ಜಾರಿಯಲ್ಲಿದೆ. ದೈಹಿಕ ಸಂಬಂಧವು ಮರಣವಿಲ್ಲದೆ ಅಮರತ್ವಕ್ಕೆ ಕಾರಣವಾಗಬಹುದು ಎಂದು ಕಿಮ್ ಅವರ ತಂದೆ ನಂಬಿದ್ದರು. ಆದರೆ ಕಿಮ್ ತಂದೆ 2011ರಲ್ಲಿ ನಿಧನರಾದರು. ಕಿಮ್ ತಂದೆ ತೀರಿಕೊಂಡ ನಂತರವೂ ಕಿಮ್​ ಅದನ್ನು ಮುಂದುವರೆಸಿದ್ದಾರೆ. ಶಾಲಾ ಮಕ್ಕಳು ಅದರಲ್ಲೂ 18 ವರ್ಷದೊಳಗಿನ ಹೆಣ್ಣು ಮಕ್ಕಳು ಕಿಮ್ಸ್ ಅರಾಜಕತೆಗೆ ಬಲಿಯಾಗುತ್ತಿದ್ದಾರೆ ಎಂದು ಯನ್ಮಿ ಪಾರ್ಕ್​ ಉತ್ತರ ಕೊರಿಯಾದ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. (ಏಜೆನ್ಸೀಸ್​)