ನ್ಯೂಸ್

ರಾಜ್ಯದಲ್ಲಿ ಕರೊನಾ : 23,558 ಹೊಸ ಪ್ರಕರಣಗಳು; 116 ಸಾವು

rashmirhebbur

ಬೆಂಗಳೂರು : ಕರ್ನಾಟಕ ಸರ್ಕಾರದ ಇಂದಿನ ಕರೊನಾ ವರದಿ ಬಿಡುಗಡೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 23,558 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 116 ಜನ ಸಾವಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 1,76,188 ಕ್ಕೆ ಏರಿದೆ.

ಇಂದು 6,412 ಕರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್​ ಹೊಂದಿದ್ದರೆ, 904 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರದ ಸೋಂಕು ಪ್ರಮಾಣ ದರವು ಶೇ. 15.47 ಕ್ಕೆ ಏರಿದೆ. ಇದು ಸೋಮವಾರದಂದು ಶೇ. 14.77 ರಷ್ಟಿತ್ತು. ಸೋಮವಾರದಂದು ಶೇ. 0.68 ರಷ್ಟಿದ್ದ ಮರಣ ಪ್ರಮಾಣ ದರವು ಇಳಿಕೆ ಕಂಡಿದ್ದು, ಶೇ.49 ರಷ್ಟಿದೆ. (ಏಜೆನ್ಸೀಸ್)